ಪಾವಗಡ:
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಸುಮಾರ 29 ಜನ ಮೃತಪಟ್ಟಿದ್ರು. ಉಗ್ರರ ದಾಳಿಯನ್ನು ಖಂಡಿಸಿ ಪಾವಗಡದಲ್ಲಿ ಮುಸ್ಲಿಂ ಬಾಂಧವರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ದಂಡಾಧಿಕಾರಿ ವರದರಾಜ್ರಿಗೆ ಮನವಿ ಸಲ್ಲಿಸಿದರು.
ಕಾಶ್ಮೀರದ ಪಹಲ್ಕಾಮ್ ನಲ್ಲಿ ಮೂವರು ಕನ್ನಡಿಗರು ಸೇರಿದಂತೆ 26 ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ್ರು, ಇಂತಹ ಪಾಕಿಸ್ತಾನ ಬೆಂಬಲಿತ ಉಗ್ರರಿಗೂ ಕೂಡ ಅದೇ ರೀತಿ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ರು. ಹೀಗಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದು ಪ್ರತಿಭಟನ ಕಾರರು ತಿಭಟನಕಾರರು ಹೇಳಿದರು. ಈ ವೇಳೆ ಜಮೆ ಮಸೀದಿಯ ಮುತವಲ್ಲಿ ಲತೀಫ್ ಸಾಬ್. ಅನ್ವರ್ ಸಾಬ್. ಎಂ.ಎ.ಆರ್. ರಿಯಾಜ್. ಸಿಕಂದರ್. ಹೋಟೆಲ್ ಶಫೀ ಇತರರು ಹಾಜರಿದ್ದರು.