PAVAGADA : ಪಾವಗಡದಲ್ಲಿ ಕೈಲಾದ ದಾನ ಮಾಡಿ | ಬಕ್ರೀದ್‌ ಆಚರಿಸಿದ ಮುಸ್ಲಿಂ ಬಾಂಧವರು

PAVAGADA NEWS : ತ್ಯಾಗ ಹಾಗೂ ದಾನದ ಪ್ರತೀಕವಾಗಿ ಮುಸ್ಲಿಂ ಬಾಂಧವರು ಬಕ್ರೀದ್‌ ಹಬ್ಬವನ್ನು ಆಚರಣೆ ಮಾಡಲಿದ್ದು, ಪಾವಗಡದಲ್ಲಿ ಸಾವಿರಾರು ಮಂದಿ ಮುಸ್ಲಿಂರು ಅರ್ಥಪೂರ್ಣವಾಗಿ ಬಕ್ರೀದ್‌ ಹಬ್ಬವನ್ನು ಆಚರಣೆ ಮಾಡಿದ್ರು. ಇಂದು ಬೆಳಗ್ಗೆ 8 ಗಂಟೆಗೆ ಪಾವಗಡ ಪಟ್ಟಣದ ಪಶು ಇಲಾಖೆ ಮುಂಬಾಗದಲ್ಲಿ ವಿವಿಧ ಮಸೀದಿ ಯಮುಖಂಡರೆಲ್ಲ ಸೇರಿ ಅಲ್ಲಿಂದ ಕಾಲ್ನಡಿಗೆ ಮೂಲಕ ಅಲ್ಲನ ಹೆಸರಿನಲ್ಲಿ ಘೋಷಣೆ ಕೂಗುತ್ತಾ, ಈದ್ಗಾ ಮೈದಾನಕ್ಕೆ ತಲುಪಿದ್ರು. ಪಾವಗಡದ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ರು.

ಇನ್ನು ಬಕ್ರೀದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಭೇಟಿಯಾಗಿ ಸಿಹಿ ತಿಂಡಿಗಳು, ಉಡುಗೊರೆಗಳನ್ನು ಹಂಚಿಕೊಂಡು ಶುಭಾಷಯ ವಿನಿಮಯ ಮಾಡಿಕೊಂಡ್ರು.

 

Author:

...
Keerthana J

Copy Editor

prajashakthi tv

share
No Reviews