ಶಿರಾ:
ಶಿರಾ ನಗರದ ಹಲವು ರಸ್ತೆಗಳು ಗುಂಡಿಗಳು ಬಿದ್ದಿದ್ದು, ಸವಾರರು ಮಾತ್ರ ಹೈರಾಣಾಗಿದ್ರು. ಶಿರಾ ನಗರದ APMC ರಸ್ತೆ, ಪ್ರವಾಸಿ ಮಂದಿರ ಸರ್ಕಲ್ ಸೇರಿದಂತೆ ನಗರದ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿದ್ವು. ಇದ್ರಿಂದ ಸವಾರರು ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದರು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಕೂಡ ವರದಿ ಬಿತ್ತರಿಸಿತ್ತು. ಆದ್ರೀಗ ಗುಂಡಿಗಳಿಗೆ ತೇಪೆ ಕಾರ್ಯ ಆರಂಭವಾಗಿದೆ.
ಸುಮಾರು ವರ್ಷದಿಂದ ನಿರ್ಮಾಣವಾದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ವು. ಹೀಗಾಗಿ ಗುಂಡಿ ಬಿದ್ದ ಸ್ಥಳದಲ್ಲಿ ಇಲಾಖೆಯಿಂದ ಗುತ್ತಿಗೆದಾರನಿಂದ ತೇಪೆ ಹಾಕುವ ಕೆಲಸ ಕೈಗೊಳ್ಳಲಾಗಿದೆ. ಸುಮಾರು ಐದಅಋು ಕಿಲೋ ಮೀಟರ್ ದೂರದ ರಸ್ತೆಗೆ ಗುಂಡಿ ಮುಚ್ಚುವ ಕೆಲಸ ಶುರುವಾಗಿದೆ. ಆದ್ರೆ ಕಾಮಗಾರಿ ನಡೆಯುತ್ತಿರೋ ಸ್ಥಳದಲ್ಲಿ ಗುತ್ತಿಗೆ ಕಾಮಗಾರಿ ನಡೆಯುದಾರನಾಗಲಿ ಅಥವಾ ಇಲಾಖೆ ಅಧಿಕಾರಿಗಳಾಗಲಿ ಇಲ್ಲದೇ ಕೆಲಸ ನಡೆಸಲಾಗುತ್ತಿದೆ. ಹೀಗಾಗಿ ಕೆಲಸಗಾರರು ಗುಂಡಿಗಳಿಗೆ ಸಮರ್ಪಕವಾಗಿ ಡಾಂಬರು ಹಾಕದೇ ಮೇಲ್ಭಾಗದಲ್ಲಿ ಮಾತ್ರ ಬೇಕಾಬಿಟ್ಟಿ ಡಾಂಬರು ಹಾಕ್ತಾ ಇದ್ದಾರೆ. ಜೊತೆಗೆ ಕಾಮಗಾರಿಗೆ ರೋಲರ್ ತರಲಾಗಿದ್ದು, ಡಾಂಬರ್ ಹಾಕಿದ ನಂತರ ಮೇಲ್ಭಾಗದಲ್ಲಿ ಕಾಂಕ್ರೀಟ್ ಪುಡಿ ಉದುರಿಸಿ ತುಳಿಸದೆ ಹಾಗೇ ಬಿಡಲಾಗುತ್ತಿದ್ದಾರೆ. ಇದ್ರಿಂದ ರಸ್ತೆ ಕುಸಿಯಲು ಆರಂಭಿಸಿದ್ದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.
ಗುತ್ತಿಗೆದಾರನಾಗಿರುವವರು ಕಾಮಗಾರಿ ಒಪ್ಪಿಕೊಂಡ ಮೇಲೆ ಮುಂದೆ ನಿಂತು ಕೆಲಸ ಮಾಡಿಸಬೇಕು.. ಆದ್ರೆ ಗುತ್ತಿಗೆದಾರ ಬೇಜಾಬ್ದಾರಿ ವರ್ತನೆಯಿಂದಾಗಿ ಕಾಮಗಾರಿ ಸರಿಯಾಗಿ ಮಾಡ್ತಾ ಇಲ್ಲ.. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಗುಣಮಟ್ಟ ಕಾಮಗಾರಿಗೆ ಸಹಕರಿಸಬೇಕಿದೆ.