ಪಾವಗಡ : ಪಾವಗಡ ಆಸ್ಪತ್ರೆಗೆ ಸಂಸದ ದಿಢೀರ್‌ ವಿಸಿಟ್‌ | ವೈದ್ಯಾಧಿಕಾರಿಗಳ ವಿರುದ್ಧ ಕಾರಜೋಳ ಗರಂ

ಪಾವಗಡ : ಪಾವಗಡ ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಸಂಸದ ಗೋವಿಂದ ಕಾರಜೋಳ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ರು. ಈ ವೇಳೆ ತಾಲೂಕಿನ ಅಭಿವೃದ್ಧಿಗೆ  ಸಂಬಂಧಿಸಿದಂತೆ ಯಾವೆಲ್ಲ ಯೋಜನೆಗಳಿಗೆ ಅನುಧಾನ ತರಬೇಕೆಂಬುದನ್ನು ನೀವುಗಳೇ ತಿಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಂದುವರೆದು ಮಾತನಾಡಿದ ಅವರು, ಸದ್ಯ ತಾವು ಸಂಸದರಾದ ಮೇಲೆ ರಾಜ್ಯದ ಒಂದಿಷ್ಟು ವಿಚಾರಗಳ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಹಾಗಾಗಿ ತಾವುಗಳು ನಮ್ಮ ಪಾವಗಡದಲ್ಲಿ ಆಗಬಹುದಾದ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿಬೇಕಿದೆ. ಹೆಚ್ಚಿನ ಅನುದಾನವನ್ನು ಹೇಗೆ ತರಬಹುದು. ಇತ್ತೀಚಿಗೆ ಯಾವ ಯೋಜನೆಗೆ ಅನುದಾನದ ಅವಶ್ಯಕತೆ ಇದೆ ಎಂಬುದನ್ನು ತಾವುಗಳೇ ತಿಳಿಸಬೇಕು. ಇಲಾಖಾವಾರು ಯೋಜನೆಗಳ ಬೇಕಾಗಿರುವ ಅನುದಾನದ ಬಗ್ಗೆ ತಿಳಿಸಿದ್ರೆ ನಾನು ಮುಂದಿನ ಕ್ರಮಕೈಗೊಳ್ಳುತ್ತೇನೆ ಎಂದರು.

ಇದೇ ವೇಳೆ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಪರೀತವಾಗಿ ವೈದ್ಯರ ಕೊರತೆಯಿದೆ ಎಂದು ಆರೋಪ ಕೇಳಿ ಬಂದ ಕೂಡಲೇ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ರು. ಸಂಸದರು ಅಲ್ಲಿ ಹಲವಾರು ಕೊಠಡಿಗಳಿಗೆ ವಿಸಿಟ್‌ ನೋಡಿದ್ರು, ಈ ವೇಳೆಯಲ್ಲಿ ಇಬ್ಬರು, ಮೂವರು ವೈದ್ಯರನ್ನು ಕಂಡು ವೈದ್ಯಾಧಿಕಾರಿಗಳ ವಿರುದ್ಧ ಗರಂ ಆದ್ರು. ಕೂಡಲೇ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಅಸ್ಪತ್ರೆಯ ಅವ್ಯವಸ್ಥೆಯ ಕುರಿತು ಚರ್ಚಿಸಿದರು. ಪ್ರತಿದಿನ ಸಾವಿರಾರು ರೋಗಿಗಳಿಗೆ ಈ ಫಿಸಿಷಿಯನ್‌ಗಳು ಏನು ಸೇವೆ ಕೊಡುತ್ತಾರೆ?" ಎಂದು ಪ್ರಶ್ನಿಸಿದ್ರು. ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಅಧಿಕಾರಿಗಳು ಹಾಜರಿರಬೇಕೆಂದು ವೈದ್ಯಾಧಿಕಾರಿಗೆ ತಾಕೀತು ಮಾಡಿದ್ರು.

Author:

...
Keerthana J

Copy Editor

prajashakthi tv

share
No Reviews