ಚಿತ್ರದುರ್ಗ: ವಿದ್ಯುತ್‌ ಶಾಕ್‌ ತಗುಲಿ ತಾಯಿ ಮಗ ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ: 

ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ಇಬ್ಬರೂ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು  ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ಬೋರಮ್ಮ (25) ಮತ್ತು ಪ್ರಣೀತ್ ಗೌಡ ಅಜಯ್ (03) ಮೃತ ದುರ್ದೈವಿಯಾಗಿದ್ದಾರೆ. ಮನೆಯಿಂದ ಶೌಚಾಲಯಕ್ಕೆ ಎಳೆದಿರುವ ವಿದ್ಯುತ್ ವೈಯರ್ ಡ್ಯಾಮೇಜ್ ಆಗಿದ್ದು, ಅದನ್ನು ಆಕಸ್ಮಿಕವಾಗಿ ಹಿಡಿದುಕೊಂಡ ಪ್ರಣೀತ್ ಗೌಡಗೆ ಕರೆಂಟ್ ಶಾಕ್ ಹೊಡಿದಿದೆ. ನಂತರ ಮಗನನ್ನು ರಕ್ಷಿಸಲು ಮುಂದಾದ ಮಗುವಿನ ತಾಯಿ ಬೋರಮ್ಮಗೂ ಸಹ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೋರಮ್ಮನ ಎದೆ ಮತ್ತು ಕೈಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಮತ್ತು ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್‌ಐ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿಲಾಗಿದೆ. ಈ ಪ್ಸಂರಕರಣ ಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

 

Author:

...
Sub Editor

ManyaSoft Admin

share
No Reviews