BELAGAVI: 3 ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಬೆಳಗಾವಿ: 

ಕೌಟುಂಬಿಕ ಕಲಹ ಹಿನ್ನಲೆ ಮೂರು ಮಕ್ಕಳ ಜೊತೆಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಾರದಾ ಡಾಲೆ, ಅಮೃತ, ಆದರ್ಶ್‌ ಎಂದು ಗುರಿಸಲಾಗಿದೆ. ಅನುಕ್ಷಾ ಡಾಲೆ ಬದುಕುಳಿದಿದ್ದು, ರಾಯಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪತಿಯು ಪ್ರತಿ ದಿನ ಕುಡಿದು ಪತ್ನಿ ಹಾಗು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದನು. ಇದೇ ಕಾರಣಕ್ಕೆ ಮನನೊಂದು ಶಾರದ ಮಕ್ಕಳ ಜೊತೆ ನದಿಗೆ ಹಾರಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ಆಗಮಿಸಿ ಶವವನ್ನು ಹೊರ ತೆಗಿದಿದ್ದಾರೆ. ಸ್ಥಳಕ್ಕೆ  ಕುಡಚಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Author:

...
Sub Editor

ManyaSoft Admin

share
No Reviews