ಮಧುಗಿರಿ :
ಮಧುಗಿರಿಉ ಶ್ರಾವಂಡನಹಳ್ಳಿ ಮುರಾರ್ಜಿ ವಸತಿ ಶಾಲೆ 2015ರಲ್ಲಿ ಆರಂಭವಾಗಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡ್ತಾನೆ ಬಂದಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ಮರಳು ಸಿದ್ದೇಶ್ವರ್ ಸೇರಿ ಮುರಾರ್ಜಿ ವಸತಿ ಶಾಲೆಯ ಆಡಳಿತ ವತಿಯಿಂದ ಅಭಿನಂದಿಸಲಾಯ್ತು. ಈ ವೇಳೆ ಮಾತನಾಡಿದ ಪ್ರಿನ್ಸಿಪಾಲ್ ಮರಳು ಸಿದ್ದೇಶ್ವರ್, ಮುಂದಿನ ವರ್ಷವೂ ಹೆಚ್ಚು ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದ್ರು. ಇನ್ನು ನಮ್ಮ ಶಾಲೆಯ ನೂರ್ ಅಲ್ಜಿನ್ 569 ಅಂಕಗಳನ್ನು ಪಡೆದಿದ್ದು, ತೌಫಿಕ್ 569 ಅಂಕಗಳು ಹಾಗೂ ರಮ್ಯ ಎನ್ 546 ಪಡೆದಿದ್ದು, ಉಳಿದ 30 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದ್ರು.
ಇನ್ನು, ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಬಾರಿ ಪಿಯುಸಿ ತರಗತಿಯನ್ನು ಕೂಡ ಅರಂಭಿಸಲಾಗಿದೆ. ಹೀಗಾಗಿ PCMB ಗೆ ಸೇರಬಯಸುವ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ ಲೆನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ದಾಖಲಾತಿಯನ್ನು ಪಡೆಯಬಹುದಾಗಿದೆ. PCMB ಗೆ ದಾಖಲಾತಿ ಪಡೆಯುವವರಿಗೆ ಯಾವುದೆ ರೀತಿಯ ದಾಖಲಾತಿ ಶುಲ್ಕವಿರುವುದಿಲ್ಲ. ಅಲ್ದೇ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಾಗ್ರಿ, ಸಮವಸ್ತ್ರ, ಗುಣಮಟ್ಟ ಶಿಕ್ಷಣ ನೀಡಲಾಗುವುದು ಎಂದು ಪ್ರಿನ್ಸಿಪಾಲ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಸುತ್ತಮುತ್ತಲ ಆಸಕ್ತ ಬಡ ವಿದ್ಯಾರ್ಥಿಗಳು ಇದ್ರ ಉಪಯೊಗ ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಆನ್ ಲೆನ್‌ನಲ್ಲಿ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಿನ್ಸಿ ಪಾಲ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.