SIRA: ಬೇಸಿಗೆಯಲ್ಲಿ ಶಿರಾದಲ್ಲಿ ನೀರಿನ ತೊಂದ್ರೆ ಆಗದಂತೆ ಶಾಸಕ ಜಯಚಂದ್ರ ಸೂಚನೆ

ಶಿರಾ:

ಶಿರಾನಗರದಲ್ಲಿತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿಬೇಸಿಗೆಯಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಶಾಸಕ ಟಿ.ಬಿ ಜಯಚಂದ್ರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ರು. ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಮಟ್ಟದ  ತಹಸೀಲ್ದಾರ್ ರೇಷ್ಮಾ, ತಾಲೂಕು ಪಂಚಾಯ್ತಿ ತಾಲೂಕು ನಿರ್ವಾಹಕ ಅಧಿಕಾರಿ ಹರೀಶ್ ಸೇರಿ ಹಲವರು ಭಾಗಿಯಾಗಿದ್ರು.

ಬೇಸಿಗೆ ಆರಂಭವಾಗಿದ್ದು ಈಗಾಗಲೇ ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಶಿರಾ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಟಿ.ಬಿ ಜಯಚಂದ್ರ ಖಡಕ್‌ ಸೂಚನೆ ನೀಡಿದ್ರು. ಅಲ್ದೇ ಶಿರಾ ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣ ಆದ್ರೆ ಅಧಿಕಾರಿಗಳು ಎದುರಿಸಲು ಸಿದ್ದರಾಗಿರಬೇಕು,ಜೊತೆಗೆತಾಲೂಕು ಹಂತದಲ್ಲಿ ಟಾಸ್ಕ್ ಫೋರ್ಸ್ ರಚಿಸಿಕೊಂಡು ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದ್ರು. ಜೊತೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಲು ತಿಳಿಸಿದ್ರು.

ಇನ್ನು ಇದೇ ಸಂದರ್ಭದಲ್ಲಿ ಶಿರಾ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಕೊರೆಸಲಾದ ಕೊಳವೆಬಾವಿಗಳಿಗೆ ಮೋಟಾರ್ ಪಂಪ್ ಮತ್ತು ಇತರೆ ಪರಿಕರಗಳನ್ನು ಫಲಾನುಭವಿಗಳಿಗೆ ಶಾಸಕ ಟಿ,ಬಿ ಜಯಚಂದ್ರ ವಿತರಣೆ ಮಾಡಿದರು.

 

 

Author:

...
Sub Editor

ManyaSoft Admin

Ads in Post
share
No Reviews