ದಾವಣಗೆರೆ : ಕರ್ನಾಟಕ ಸರ್ಕಾರದ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯು ತನ್ನ ಹೊಸ ಬ್ರಾಂಡ್ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಬಗ್ಗೆ ಕನ್ನಡ ಪರ ಹೋರಾಟಗಾರರು, ಚಲನಚಿತ್ರರಂಗದ ಪ್ರಮುಖರು ಮತ್ತು ರಾಜಕೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಮ್ಮ ರಾಜ್ಯದಲ್ಲಿ ತುಂಬಾ ಪ್ರತಿಭಾವಂತ ನಟಿಯರು ಇದ್ದಾರೆ. ಅವರನ್ನೇ ರಾಯಬಾರಿಯಾಗಿ ಆಯ್ಕೆ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಆಚೆ ರಾಜ್ಯದಿಂದ ಕರೆತಂದಿರಬಾರದಿತ್ತು. ನಮ್ಮ ರಾಜ್ಯದವರನ್ನೇ ಆಯ್ಕೆ ಮಾಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು," ಎಂದು ಹೇಳಿದ್ದಾರೆ.
ಕನ್ನಡ ಪರ ಸಂಘಟನೆಗಳು ಕೂಡ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ, ಬೆಂಗಳೂರಿನಲ್ಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಿವೆ. ಮೈಸೂರಿನ ಪರಿಮಳ ದೇಶಾದ್ಯಂತ ಪ್ರಸಿದ್ಧ. ಇದನ್ನು ಪ್ರತಿನಿಧಿಸಲು ಕನ್ನಡದ ನಟಿಯರೇ ಯೋಗ್ಯ. ನಮ್ಮ ಮಣ್ಣಿನ ಪರಿಮಳಕ್ಕೆ ಹೊರಗಿನ ವ್ಯಕ್ತಿತ್ವವನ್ನೀಡುವುದು ಸರಿಯಲ್ಲ, ಎಂಬ ಧ್ವನಿ ಕೇಳಿಬರುತ್ತಿದೆ.
ಮೈಸೂರು ಸ್ಯಾಂಡಲ್ ಸೋಪ್‌ನ ಬ್ರಾಂಡ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ರಾಜ್ಯಾದ್ಯಂತ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಇದು ಕನ್ನಡದ ಗೌರವ, ಸ್ಥಳೀಯ ಪ್ರತಿಭೆಗಳ ಮೆರೆ ಮತ್ತು ರಾಜ್ಯದ ಆತ್ಮಗೌರವಕ್ಕೆ ಸಂಬಂಧಪಟ್ಟ ವಿಷಯವೆಂದೂ, ಈ ನಿರ್ಧಾರ ಪುನರ್ ಪರಿಗಣನೆಗೆ ಒಳಪಡಬೇಕೆಂದೂ ಆಗ್ರಹಗಳು ಕೇಳಿಬರುತ್ತಿವೆ.