ಕೊರಟಗೆರೆ : ಕೊರಟಗೆರೆಯಲ್ಲಿ ಅರ್ಥಪೂರ್ಣ ಬುದ್ಧ ಜಯಂತಿ

ಕೊರಟಗೆರೆ :

ರಾಜ್ಯ ಸರ್ಕಾರ ಪ್ರತಿ ತಾಲೂಕು ಆಡಳಿತವತಿಯಿಂದ ಶ್ರೀ ಭಗವಾನ್‌ ಬುದ್ಧ ಜಯಂತೋತ್ಸವ ಆಚರಣೆಗೆ ಸೂಚನೆ ನೀಡಿ ಆದೇಶ ನೀಡಲಾಗಿತ್ತು. ಸರ್ಕಾರದ ಆದೇಶದಂತೆ ಕೊರಟಗೆರೆ ತಾಲೂಕು ಆಡಳಿತವತಿಯಿಂದ ಇಂದು ವಿಶ್ವಜ್ಞಾನಿ ಗೌತಮ ಬುದ್ಧ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ರು. ಕೊರಟಗೆರೆ ಪಟ್ಟಣದ ಮಿನಿವಿಧಾನಸೌಧ ಕಚೇರಿಯಲ್ಲಿ ತಹಶೀಲ್ದಾರ್‌ ಮಂಜುನಾಥ್‌ ನೇತೃತ್ವದಲ್ಲಿ ಬುದ್ಧ ಜಯಂತಿಯನ್ನು ಆಚರಣೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಬುದ್ಧನ ಫೋಟೋಗೆ ಹೂಗಳಿಂದ ಅಲಂಕರಿಸಿ, ಪೂಜೆ ನೆರವೇರಿಸಿ, ಬುದ್ಧನ ಆದರ್ಶಗಳನ್ನು ಮೆಲುಕು ಹಾಕಲಾಯ್ತು.

ಕಾರ್ಯಕ್ರಮದಲ್ಲಿ ಗೃಹಸಚಿವರ ವಿಶೇಷ ಅಧಿಕಾರಿ ಎಸ್.ನಾಗಣ್ಣ ಮಾತನಾಡಿ, ಬುದ್ದ, ಬಸವ ಮತ್ತು ಅಂಬೇಡ್ಕರ್ ಮಾರ್ಗದರ್ಶನದ  ಸಂವಿಧಾನ ಬದ್ದ ದೇಶ ನಮ್ಮದು. ಸನಾತನ ಧರ್ಮದಲ್ಲಿ ಶೂದ್ರರಿಗೆ ಶಿಕ್ಷಣ ಇರಲಿಲ್ಲ. ಮಹಿಳೆಯರಿಗೆ ಸಮಾನತೆಯು ಮರೀಚಿಕೆ ಆಗಿತ್ತು. ಇದರ ಬಗ್ಗೆ ಯಾರು ಸಹ ಚಿಂತನೆ ಮಾಡೋದಿಲ್ಲ. ಮನುಷ್ಯ ತನ್ನ ಸ್ವಾರ್ಥ ಚಿಂತನೆಯನ್ನ ಬಿಟ್ಟು ಸಮಾಜಕ್ಕಾಗಿ ಬದುಕಬೇಕಿದೆ ಎಂದರು.

ಕೊರಟಗೆರೆ ತಹಶೀಲ್ದಾರ್ ಮಂಜುನಾಥ್‌. ಮಾತನಾಡಿ, ವಿಶ್ವಕ್ಕೆ ಜ್ಞಾನದ ಪರಿಚಿಸಿದ ಮಹಾನ್ ವ್ಯಕ್ತಿ ಗೌತಮಬುದ್ದ. ಮಹಾರಾಜ ಆಗಿದ್ದ  ಗೌತಮಬುದ್ದ ಬಿಕ್ಷೆ ಬೇಡಿ ಊಟ ಮಾಡುತ್ತಾನೆ. ದುಃಖಕ್ಕೆ ಮೂಲ  ಕಾರಣ ಏನು ಎಂಬುದನ್ನಾ ಹುಡುಕುವ ಕೆಲಸ ಮಾಡುತ್ತಾನೆ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ,  ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ್, ಕೃಷಿ ಇಲಾಖೆಯ ನಾಗರಾಜು, ಸಮಾಜ ಕಲ್ಯಾಣ ಇಲಾಖೆಯ ಯಮುನಾ, ಸಾಮಾಜಿಕ ವಲಯ ಅಧಿಕಾರಿ ಶಿಲ್ಪಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Author:

...
Keerthana J

Copy Editor

prajashakthi tv

share
No Reviews