ಮಣಿಪುರ : ಮಣಿಪುರದಲ್ಲಿ 5.2 ತೀವ್ರತೆಯ ಸರಣಿ ಭೂಕಂಪ ..!

ಇಂಫಾಲ್: ಮಣಿಪುರದ ಹಲವು ಜಿಲ್ಲೆಗಳಲ್ಲಿ ಇಂದು ಬೆಳಗಿನ ಜಾವದಿಂದ ಆರಂಭವಾಗಿ ಸರಣಿ ಭೂಕಂಪಗಳು ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಈ ಭೂಕಂಪಗಳಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಭೂಕಂಪ ಚುರಾಚಂದ್‌ಪುರ ಜಿಲ್ಲೆಯಲ್ಲಿ ಬೆಳಗಿನ ಜಾವ 1:54ಕ್ಕೆ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2 ಆಗಿತ್ತು. ಇದಾದ ಬಳಿಕ ಬೆಳಿಗ್ಗೆ 2:26ಕ್ಕೆ ನೊನಿ ಜಿಲ್ಲೆಯಲ್ಲಿ 2.5 ತೀವ್ರತೆಯ ಮತ್ತೊಂದು ಭೂಕಂಪ ವರದಿಯಾಗಿದೆ. ಇದಾದ ಕೆಲ ಗಂಟೆಗಳ ಬಳಿಕ, ಬೆಳಿಗ್ಗೆ 10:23ಕ್ಕೆ ಚುರಾಚಂದ್‌ಪುರದಲ್ಲೇ ಮತ್ತೆ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಆದಾಗ್ಯೂ, ಈ ಎಲ್ಲ ಭೂಕಂಪಗಳಲ್ಲಿಯೂ ಯಾವುದೇ ಪ್ರಾಣಹಾನಿ ಅಥವಾ ಪ್ರಮುಖ ಆಸ್ತಿ ಹಾನಿಯ ವರದಿ ಲಭ್ಯವಾಗಿಲ್ಲ. ಜನತೆಗೆ ಭಯವಿಲ್ಲದೆ ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗಿದೆ.

 

Author:

...
Sushmitha N

Copy Editor

prajashakthi tv

share
No Reviews