ಕ್ರಿಕೆಟ್:
ಈ ಬಾರಿ ಕಪ್ ಗೆದ್ದು ತಲಾ ಧೋನಿ ಐಪಿಎಲ್‌ಗೆ ಭರ್ಜರಿ ವಿದಾಯ ಹೇಳ್ತಾರೆ ಅಂತಾ ಅವರ ಅಭಿಮಾನಿಗಳು ಅಂದುಕೊಂಡಿದ್ರು. ಆದ್ರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಧೋನಿ ಮುಂದಿನ ಸೀಸನ್‌ನಲ್ಲಿ ಆಡ್ತಾರಾ, ಇಲ್ವಾ ಅನ್ನೋ ಆತಂಕದಲ್ಲಿ ಮಾಹಿ ಫ್ಯಾನ್ಸ್ ಇದ್ದಾರೆ.
ಈ ನಡುವೆ ನಿನ್ನೆ ಪಂದ್ಯದ ಟಾಸ್ ವೇಳೆ ದೋನಿ ನೀಡಿರುವ ಅದೊಂದು ಹೇಳಿಕೆ ವ್ಯಾಪಕವಾಗಿ ವೈರಲ್ ಆಗ್ತಿದೆ. ಟಾಸ್ ವೇಳೆ ಕಾಮೆಂಟೇಟರ್ ಡ್ಯಾನಿ ಮಾರಿಸನ್ ಇದು ನಿಮ್ಮ ಕೊನೆಯ ಸೀಸನ್ ಆಗಬಹುದಾ ಎಂಬ ಹೇಳಿಕೆಗೆ ಧೋನಿ ಉತ್ತರಿಸಿದ್ದು, ಮಾಹಿ ಹೇಳಿಕೆಯನ್ನ ಕೇಳಿ ಅಭಿಮಾನಿಗಳು ಸಖತ್ ಬೇಸರಗೊಂಡಿದ್ದಾರೆ.
ಡ್ಯಾನಿ ಮಾರಿಸನ್ ಇದು ನಿಮ್ಮ ಕೊನೆಯ ಸೀಸನ್ನಾ ಅಥವಾ ಮುಂದಿನ ಸೀಸನ್ ಆಡ್ತೀರಾ ಎಂದು ಕೇಳಿದ ಪ್ರಶ್ನೆಗೆ ನಾನು ಮುಂದಿನ ಸೀಸನ್ ಅಲ್ಲ, ಮುಂದಿನ ಪಂದ್ಯಕ್ಕೆ ಬರುತ್ತೀನಾ ಎಂಬುದೇ ನನಗೆ ತಿಳಿದಿಲ್ಲ' ಎಂದು ಉತ್ತರಿಸಿದ್ದಾರೆ.