ಮಧುಗಿರಿ : ನೆನೆಗುದಿಗೆ ಬಿದ್ದಿದ್ದ ಕಟ್ಟಡಗಳ ತುರ್ತು ಕಾಮಗಾರಿಗೆ ರಾಜೇಂದ್ರ ಖಡಕ್ ಸೂಚನೆ

ಗುದ್ದಲಿ ಪೂಜೆ ನೆರವೇರಿಸಿದ ಆರ್‌ ರಾಜೇಂದ್ರ ರಾಜಣ್ಣ
ಗುದ್ದಲಿ ಪೂಜೆ ನೆರವೇರಿಸಿದ ಆರ್‌ ರಾಜೇಂದ್ರ ರಾಜಣ್ಣ
ತುಮಕೂರು

ಮಧುಗಿರಿ:

ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿ, ಮಿಡಿಗೇಶಿಯ ಕಾರೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನ ಕಟ್ಟಡಗಳ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ಆರ್‌ ರಾಜೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಶಬ್ಬೀರ್‌ ಅಹಮದ್‌, ಕರ್ನಾಟಕ ಗೃಹ ಮಂಡಳಿ ಕಾರ್ಯಪಾಲಕ ಇಂಜಿನಿಯರ್‌ ಹಾಲೇಶಪ್ಪ, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ವೆಂಕಟೇಶ್‌ ಸೇರಿ ಹಲವರು ಭಾಗಿಯಾಗಿದ್ದರು.

ಈ ವೇಳೆ ರಾಜೇಂದ್ರ ರಾಜಣ್ಣ ಮಾತನಾಡಿ ವಸತಿ ಶಾಲೆಗಳಲ್ಲಿ ಏನೇ ಸಮಸ್ಯೆ ಇದ್ರೂ ಗಮನಕ್ಕೆ ತನ್ನಿ ಅದನ್ನು ಸರಿಪಡಿಸುವ ಕೆಲಸ ಮಾಡೋಣ ಎಂದರು. ವಸತಿ ಶಾಲೆಗಳಲ್ಲಿ ವಿಶಾಲವಾದ ಜಾಗವಿದ್ದು, ಕ್ರೀಡೆಗಳಿಗೆ ಬೇಕಾದ ಪರಿಕರಗಳು ಹಾಗೂ ಸೂಕ್ತ ಸೌಲಭ್ಯ ಕಲ್ಪಿಸಲು ಬದ್ಧನಾಗಿದ್ದೇನೆ. ಮಕ್ಕಳು ಸರ್ಕಾರ ನೀಡುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.

ಶ್ರಾವಂಡನಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಕಟ್ಟಡವನ್ನು ರಾಜೇಂದ್ರ ವೀಕ್ಷಿಸಿ, ಪ್ರಿನ್ಸಿಪಾಲ್ ಅವರನ್ನು ಪ್ರಶ್ನಿಸಿದ್ದರು. ಎರಡೂವರೆ ವರ್ಷದಿಂದ ಕಾಮಗಾರಿ ನೆನೆಗುದಿಗೆ ಬಿದಿದ್ದು ಈ ಬಗ್ಗೆ ಗುತ್ತಿಗೆದಾರ ದೂರವಾಣಿ ಸಂಪರ್ಕಕ್ಕು ಸಿಗುತ್ತಿಲ್ಲ ಎಂದು ಪ್ರಿನ್ಸಿಪಾಲರು ತಿಳಿಸಿದ್ದು, ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

 

Author:

share
No Reviews