ಮಧುಗಿರಿ : ರೋಗಗಳ ಜನ್ಮಸ್ಥಾನವಾದ ಮಧುಗಿರಿ ಮಟನ್ ಮಾರ್ಕೆಟ್..!

ಮಧುಗಿರಿಯ ಪಟ್ಟಣದ ಮಟನ್‌ ಮಾರ್ಕೆಟ್
ಮಧುಗಿರಿಯ ಪಟ್ಟಣದ ಮಟನ್‌ ಮಾರ್ಕೆಟ್
ತುಮಕೂರು

ಮಧುಗಿರಿ:

ಭಾನುವಾರ ಬಂತೆದರೆ ಮಾಂಸ ಪ್ರಿಯರಿಗೆ ಒಂದು ರೀತಿಯ ಹಬ್ಬ. ಚಿಕನ್‌, ಮಟನ್‌, ಮೀನು ಖರೀದಿಸಲು ಮುಗಿಬೀಳ್ತಾರೆ. ಆದರೆ ಇಲ್ಲಿನ ಮಟನ್‌ ತಿಂದರೆ ನಿಮ್ಮ ಜೀವಕ್ಕೆ ಕಂಟಕ ಎದುರಾಗೋದು ಪಕ್ಕಾ ಎಂಬಂತಾಗಿದೆ. ಮಧುಗಿರಿ ಪುರಸಭೆಯಿಂದ ಮಾಂಸ ಮಾರಾಟಕ್ಕೆಂದು ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಡಲಾಗಿದೆ, ಆದರೆ ಇಲ್ಲಿನ ಕುರಿ, ಮೇಕೆ ಮಾಂಸದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಂದ ಗಬ್ಬೇದ್ದು ನಾರುತ್ತಿದೆ. ಇಲ್ಲಿನವರಿಗೆ ಶುಚ್ಚಿತ್ವ ಎನ್ನೋದೇ ಗೊತ್ತಿಲ್ಲ. ಅಪ್ಪಿ ತಪ್ಪಿ ಇಲ್ಲಿ ಮಾಂಸ ತಗೊಂಡು ಹೋಗಿ ತಿಂದರೆ ರೋಗ ಹತ್ತಿಸಿಕೊಳ್ಳೋದಂತೂ ಸತ್ಯ.

ಮಧುಗಿರಿ ಪಟ್ಟಣದ DYSP ಕಚೇರಿ ಸಮೀಪವೇ ಈ ಮಟನ್‌ ಮಾರ್ಕೆಟ್‌ ಇದ್ದು, ಸುಮಾರು 10 ಮಟನ್‌ ಸ್ಟಾಲ್‌ಗಳಿವೆ. ತ್ಯಾಜ್ಯದ ಬಾವಿಯಲ್ಲಿ ತ್ಯಾಜ್ಯ ತುಂಬಿ ಹರಿಯುತ್ತಿದೆ. ಗಲೀಜುಗಳನ್ನು ತುಳಿದುಕೊಂಡು, ಮೂಗು ಮುಚ್ಚಿಕೊಂಡೇ ಮಾಂಸ ಖರೀದಿ ಮಾಡಿಕೊಂಡು ಹೋಗ್ತಾರೆ. ಜೊತೆಗೆ ಇಷ್ಟು ಅಸ್ವಚ್ಛತೆಯಿಂದ ಇರೋ ಮಟನ್‌ ಅಂಗಡಿಗಳಲ್ಲಿ ಸಿಗೋ ಮಾಂಸ ಕೂಡ ಕ್ಲೀನ್‌ ಆಗಿ ಇರೋದಿಲ್ಲ, ಇದರಿಂದ ಆ ಮಾಂಸವನ್ನು ತಿಂದರೆ ರೋಗಕ್ಕೆ ತುತ್ತಾಗೋದಂತೂ ಪಕ್ಕಾ, ಇಂತಹ ಅಸ್ವಚ್ಛತೆ ಕೂಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಅಂತಿಲ್ಲ.

ಇನ್ನು ಈ ಮಟನ್‌ ಸ್ಟಾಲ್‌ಗಳಿಂದ ಪುರಸಭೆ ಬೊಕ್ಕಸಕ್ಕೆ ಬಾಡಿಗೆ ಹಣವೂ ಕೂಡ ಸೇರ್ತಾ ಇದೆ. ಆದರೂ ಕೂಡ ಪುರಸಭೆ ಅಧಿಕಾರಿಗಳು ಕ್ಲೀನಿಂಗ್‌ ಕೆಲಸ ಮಾತ್ರ ಮಾಡ್ತಾ ಇಲ್ಲ. ಜೊತೆಗೆ ಈ ಮಾರುಕಟ್ಟೆಗೆ ಹೊಂದಿಕೊಂಡಿರುವ ಮೀನು ಮಾರುಕಟ್ಟೆ ಸ್ಥಿತಿಯೂ ಭಿನ್ನವೇನಿಲ್ಲ. 5 ಮೀನು ಅಂಗಡಿಗಳು ತೆರೆದಿರುತ್ತದೆ ಮೀನು ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ರಸ್ತೆ ಮೇಲೆ ಮೀನು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಷ್ಟಲ್ಲದೇ ಮಾಂಸ ಮಾರುಕಟ್ಟೆ ಹಂದಿ, ನಾಯಿಗಳ ಆವಾಸ ಸ್ಥಾನವಾಗಿದೆ. ಮಾಂಸ ಸ್ವಚ್ಛಗೊಳಿಸಿದ ನೀರು ಕಾಲುವೆ ಮೂಲಕ ಸರಾಗವಾಗಿ ಹರಿಯದ ಕಾರಣ ಜನವಸತಿ ಪ್ರದೇಶದ ವಾತಾವರಣ ಹದಗೆಡುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪಟ್ಟಣದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಮಾಂಸ ಮಾರುಕಟ್ಟೆಯಲ್ಲಿ ಅಸ್ಚಚ್ಛತೆ ತಾಂಡವ ಆಡ್ತಾ ಇರೋದರಿಂದ ಇಲ್ಲಿನ ಜನರು ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಖರೀದಿಸಲು ಹಿಂದೇಟು ಹಾಕ್ತಾ ಇದ್ದಾರೆ. ಇದರಿಂದ ಮಾಂಸ ಪ್ರಿಯರು ಗುಡ್ಡೆ ಮಾಂಸದ ಕಡೆ ಹೋಗ್ತಾ ಇದ್ದಾರೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದು,  ಪಟ್ಟಣದಲ್ಲಿ ಗುಡ್ಡೆ ಮಾಂಸ ಮಾರಾಟದ ಹಾವಳಿ ಹೆಚ್ಚಾಗುತ್ತಿದೆ. ಹೀಗಾಗಿ ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾಂಸ ಮಾರುಕಟ್ಟೆಗೆ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇನ್ನಾದರೂ ಪುರಸಭೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಮಾಂಸ ಮಾರುಕಟ್ಟೆಯನ್ನು ಶುಚಿತ್ವಗೊಳಿಸಿ ಜನರ ಆರೋಗ್ಯವನ್ನು ಕಾಪಾಡಬೇಕಿದೆ ಅನ್ನೋದು ಪ್ರಜಾಶಕ್ತಿ ಟಿವಿಯ ಕಳಕಳಿಯಾಗಿದೆ.

Author:

share
No Reviews