ಮಧುಗಿರಿ: ಒಂಟಿ ಕರಡಿ ಪ್ರತ್ಯಕ್ಷ | ಗ್ರಾಮಸ್ಥರು ಆತಂಕ..!

ಗ್ರಾಮದಲ್ಲಿ ಕಾಣಿಸಿಕೊಂಡ ಕರಡಿ
ಗ್ರಾಮದಲ್ಲಿ ಕಾಣಿಸಿಕೊಂಡ ಕರಡಿ
ತುಮಕೂರು

ಮಧುಗಿರಿ:

ಹಗಲಲ್ಲೇ ಕರಡಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕಗೊಂಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ಒಂಟಿ ಕರಡಿಯೊಂದು ಹಗಲು ವೇಳೆಯಲ್ಲೇ ಪ್ರತ್ಯಕ್ಷವಾಗಿದೆ. ಗ್ರಾಮದ ಶ್ರೀರಾಮ ರೆಡ್ಡಿ ಎಂಬುವರ ಮನೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯಲ್ಲೇ ಕರಡಿ ಓಡಾಡುತ್ತಿದ್ದು, ಸ್ಥಳೀಯರ ಮೊಬೈಲ್‌ ನಲ್ಲಿ ಕರಡಿಯ ಓಡಾಟದ ದೃಶ್ಯ ಸೆರೆಯಾಗಿದೆ. ಇನ್ನು ಕರಡಿಯ ಓಡಾಟದಿಂದ ಗ್ರಾಮಸ್ಥರು ಹೊರಗಡೆ ಬರಲು ಸಹ ಆತಂಕಪಡುವಂತ ಸ್ಥಿತಿ ನಿರ್ಮಾಣವಾಗಿದ್ದು ಭಯಭೀತರಾಗಿದ್ದಾರೆ. ಕೂಡಲೇ ಕರಡಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

Author:

share
No Reviews