ಮಧುಗಿರಿ:
ಮಧುಗಿರಿಯ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಈ ವೇಳೆ ಕೊಂಡೋತ್ಸವ ಕೂಡ ನಡೆದಿದ್ದು, ನೂರಾರು ಭಕ್ತರು ಕೊಂಡ ಹಾಯುವ ಮೂಲಕ ಹರಕೆ ತೀರಿಸಿದ್ರು. ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಮತ್ತು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ದಂಪತಿ ಸಮೇತರಾಗಿ ಭಾಗವಹಿಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಮಧುಗಿರಿಯನ್ನು ಗುಡಿಸಲು ಮುಕ್ತವಾಗಿ ಮಾಡಿಯೇ ತೀರುತ್ತೇನೆ. ಜೊತೆಗೆ ತಾಲೂಕಾಗಿರುವ ಮಧುಗಿರಿಯನ್ನ ಜಿಲ್ಲೆಯನ್ನಾಗಿ ಮಾಡುತ್ತೇನೆ ಅಂತಾ ಮಧುಗಿರಿ ಜನತೆಗೆ ಮಾತುಕೊಟ್ಟರು.
ಈಗಾಗಲೇ ಮದುಗಿರಿ ಬೆಟ್ಟಕ್ಕೆ ಕೇಬಲ್ ಕಾರ್ ಟೆಂಡರ್ ಪ್ರಕ್ರಿಯೆಯು ಕೂಡ ಮುಗಿದಿದ್ದು ಮತ್ತಷ್ಟು ಕೆಲಸಗಳನ್ನ ಮಾಡಲು ತಾವುಗಳು ಸಲಹೆಗಳನ್ನ ಕೊಟ್ಟರೆ ಖಂಡಿತವಾಗಿಯೂ ಅವನ್ನೆಲ್ಲ ಮಾಡಿಯೆ ತೀರುತ್ತೇನೆ. ರಾಜಕೀಯವಾಗಿ ಇದುವರೆಗೂ ರೈತರ ಸಾಲ ಮನ್ನಾ ಮಾಡಿದ ಇತಿಹಾಸವಿದ್ದರೆ ಅದು ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಕುಮಾರಸ್ವಾಮಿ ಮಾತ್ರ. ಹಾಗಾಗಿ ಸಾಲ ಮನ್ನಾ ಮಾಡಿದ್ರೆ ಆರ್ಥಿಕವಾಗಿ ತೊಂದರೆಯಾಗುತ್ತದೆ ಎನ್ನುವ ಬಿಜೆಪಿಯ ಬೊಗಳೆ ಮಾತುಗಳನ್ನ ನಂಬಬೇಡಿ ಎಂದು ಗುಡುಗಿದರು.