ತುಮಕೂರು : ತುಮಕೂರು ನಗರ ಶರವೇಗದಲ್ಲಿ ಬೆಳೆಯುತ್ತಿದೆ. ನಗರ ಬೆಳೆದಂತೆಲ್ಲಾ ಇಲ್ಲಿನ ಸಮಸ್ಯೆಗಳು ಕೂಡ ಹೆಚ್ಚಾಗ್ತಿವೆ. ಅದರಲ್ಲಿಯೂ ನಗರದ ಪ್ರಮುಖ ರಸ್ತೆಗಳಲ್ಲಿ, ಮಾರ್ಕೆಟಿಂಗ್ ಏರಿಯಾಗಳಲ್ಲಿ ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ, ಫುಟ್‌ಪಾತ್ ಒತ್ತುವರಿಯಂತಹ ಸಮಸ್ಯೆಗಳು ಹೆಚ್ಚಾಗ್ತಿದೆ. ನಗರದ ಹಲವಾರು ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಸ್ಥರು ಫುಟ್ ಪಾತ್‌ಗಳನ್ನೇ ಒತ್ತುವರಿ ಮಾಡಿಕೊಂಡಿದ್ದು ಪಾದಚಾರಿಗಳು ಓಡಾಡೋದಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಫುಟ್ ಪಾತ್‌ಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಹಣವನ್ನ ಖರ್ಚು ಮಾಡಲಾಗಿದೆ. ಆದ್ರೆ ನಗರದ ಬಾರ್ ಲೇನ್ ರಸ್ತೆಯಲ್ಲಿ ಫುಟ್ ಪಾತೇ ಮಾಯವಾಗಿದ್ದು, ಕೆಲವೆಡೆ ವ್ಯಾಪಾರಸ್ಥರು ಫುಟ್ ಪಾತ್ ಒತ್ತುವರಿ ಮಾಡಿಕೊಂಡಿದ್ರೆ, ಇನ್ನು ಕೆಲವೆಡೆ ಫುಟ್ ಪಾತ್ ಹಾಳಾಗಿ ಹೋಗಿದೆ.