ಮಧುಗಿರಿ:
ಕಳೆದ ಮಾ.11 ರಂದು ಪ್ರಾರಂಭವಾಗಿದ್ದ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಜಾತ್ರೆಗೆ ತೆರೆ ಬಿದ್ದಿದೆ. ಕಳೆದ ಹತ್ತು ದಿನಗಳ ನಡೆದ ಮಧುಗಿರಿ ಶಕ್ತಿ ದೇವತೆ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರೆಯಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿಸುವ ಬೆಳ್ಳಿ ಪಲ್ಲಕ್ಕಿಗೆ ಬರೋಬ್ಬರಿ 60 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಯುಗಾದಿ ಹಬ್ಬಕ್ಕೂ ಮುನ್ನಾ ಹಾಗೂ ಪಾಲ್ಗುಣ ಮಾಸದಲ್ಲಿ ಆರಂಭವಾಗುವ ಜಾತ್ರ ಮಹೋತ್ಸವು 11 ದಿನಗಳ ಕಾಲ ನಡೆಯುವ ಬೃಹತ್ ಜಾತ್ರ ಮಹೋತ್ಸವ ವಾಗಿದ್ದು ಇದರಲ್ಲಿ ಬೆಳ್ಳಿ ಪಲ್ಲಕ್ಕಿ ಹಾಗೂ ಅಗ್ನಿಕೊಂಡ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿಗೆ ಮಧಿಗಿರಿ, ಕೊರಟಗೆರೆ, ಶಿರಾ ಹಾಗೂ ಜಿಲ್ಲೆಯಿಂದ ಮಾತ್ರವಲ್ಲದೆ, ಪಕ್ಕದ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ. ತಮ್ಮ ಇಷ್ಟಾರ್ಥ ಹಿಡೇರಿಕೆಗಾಗಿ ಅಗ್ನಿಕೊಂಡೊತ್ಸವದಲ್ಲಿ ಭಾಗಿಯಾಗುತ್ತಾರೆ.
ಇನ್ನು ದಂಡಿನ ಮಾರಮ್ಮ ತಾಯಿಯ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಬಹುದೊಡ್ಡ ಇತಿಹಾಸವಿದೆ, ಮಧುಗಿರಿಯ ಪಣ್ಣೆ ರೈತರು 60 ವರ್ಷಗಳ ಹಿಂದೆಯೇ ದಿವ್ಯವಾದ ಬೆಳ್ಳಿಯ ಪಲ್ಲಕ್ಕಿ ಯನ್ನು ತಯಾರಿಸಿ ಶ್ರೀ ದಂಡಿನ ಮಾರಮ್ಮನ ದೇವಿಯ ಮೆರೆವಣಿಗೆ ಮಾಡುತ್ತಾರೆ. ಈ ಭವ್ಯವಾದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಅಮ್ಮ ವರನ್ನು ಮಂಡಿಸಿ ಬೆಳ್ಳಿಪಲ್ಲಕ್ಕಿಯ ಉದ್ಘಾಟನಾ ಕಾರ್ಯಕ್ರಮವನ್ನು 1965 ರಂದು ಅಂದಿನ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ರವರು ತಮ್ಮ ಅಮೃತ ಹಸ್ತದಿಂದ ಈ ಉದ್ಘಾಟನಾ ಸಮಾರಂಭೋತ್ಸವವನ್ನು ನೆರವೇರಿಸಿದ್ದರು. ಇದೀಗ 2025ಕ್ಕೆ ಬೆಳ್ಳಿ ಪಲ್ಲಕ್ಕಿಯು ಲೋಕಾರ್ಪಣೆಗೊಂಡು 60 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನ ವರೆಗೂ ದಂಡಿನ ಮಾರಮ್ಮ ಜಾತ್ರ ಮಹೋತ್ಸವು ಎಲ್ಲರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನೇರವೇರುತ್ತಿದೆ.