ಮಧುಗಿರಿ: ಫುಡ್ ಫೆಸ್ಟ್ ನಲ್ಲಿ ಮಿಂಚಿದ ಕಾರ್ಡಿಯಲ್ ಶಾಲಾ ಮಕ್ಕಳು

ಕಾರ್ಡಿಯಲ್‌ ಶಾಲೆಯ ಫುಡ್‌ ಫೆಸ್ಟ್‌ ಕಾರ್ಯಕ್ರಮ
ಕಾರ್ಡಿಯಲ್‌ ಶಾಲೆಯ ಫುಡ್‌ ಫೆಸ್ಟ್‌ ಕಾರ್ಯಕ್ರಮ
ತುಮಕೂರು

ಮಧುಗಿರಿ:

ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ, ಮಕ್ಕಳನ್ನು ಪ್ರೋತ್ಸಾಹಿಸಲು ಶಿಕ್ಷಕರು ವಾರ್ಷಿಕೋತ್ಸವ, ಶಾಲಾ ಸಂತೆ, ಫುಡ್‌ ಫೆಸ್ಟ್‌ ನಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ. ಸದಾ ಓದು, ಬರಹದಲ್ಲೇ ಬ್ಯೂಸಿಯಾಗಿರೋ ಮಕ್ಕಳು ಇಂತಹ ಚಟುವಟಿಕೆಗಳಿಂದ ಲವಲವಿಕೆಯಿಂದ ಇರ್ತಾರೆ. ಹೀಗಾಗಿ ಮಧುಗಿರಿ ತಾಲೂಕಿನ ಪ್ರತಿಷ್ಠಿತ ಶಾಲೆಯಾಗಿರೋ ಕಾರ್ಡಿಯಲ್‌ ಶಾಲೆಯಲ್ಲಿ ಮಕ್ಕಳಿಗಾಗಿ ಫುಡ್‌ ಫೆಸ್ಟ್‌ ಹಾಗೂ ಮೆಟ್ರಿಕ್‌ ಸಂತೆಯನ್ನು ಆಯೋಜನೆ ಮಾಡಿದ್ದರು. ಫುಡ್‌ ಫೆಸ್ಟ್‌ನಲ್ಲಿ ಮಕ್ಕಳು ಖುಷಿ ಖುಷಿಯಿಂದ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಖಜಾಂಚಿ ಶೈಲಜಾ ನಾಗರಾಜ್, ಶಾಲೆಯ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಫುಡ್‌ ಫೆಸ್ಟ್‌ಗೆ ಕಾರ್ಡಿಯಲ್‌ ಶಾಲೆಯ ಮುಖ್ಯಸ್ಥರಾದ ಎಂ.ಕೆ ನಂಜುಡಯ್ಯ, ಖಚಾಂಚಿ ಶೈಲಜಾ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಒಲೆಯನ್ನು ಬಳಸದೇ ಮಕ್ಕಳು ಆರೋಗ್ಯಕರವಾದ ಅಡುಗೆಯನ್ನು ಮಾಡಿದರು, ಜೊತೆಗೆ ಚಿಕ್ಕಪುಟ್ಟ ತರಕಾರಿ, ಕುರುಕಲು ತಿಂಡಿಯನ್ನು ತಂದು ಶಾಲಾ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ವ್ಯಾಪಾರ ಜ್ಞಾನವನ್ನು ಕೂಡ ಬೆಳೆಸಿಕೊಂಡರು. ಇನ್ನು ಶಾಲಾ ಮುಖ್ಯಸ್ಥ ನಂಜುಡಯ್ಯ ಅವರು ಪ್ರತಿ ಸ್ಟಾಲ್‌ಗೂ ತೆರಳಿ ಮಕ್ಕಳು ತಯಾರಿಸಿದ ಅಡುಗೆಯನ್ನು ಸವಿದು, ಶುಚಿಯಾಗಿ ರುಚಿಯಾಗಿ ಅಡುಗೆ ಮಾಡಿದ ಮಕ್ಕಳಿಗೆ ಬಹುಮಾನವನ್ನು ಕೂಡ ವಿತರಿಸಿದರು. ಜೊತೆಗೆ ಮಕ್ಕಳು ಸಾಮಾನ್ಯ ಸಂತೆಯಲ್ಲಿ ತರಕಾರಿ, ಏಳನೀರು ಮಾರಿ ಖುಷಿಪಟ್ಟರು.

ಈ ವೇಳೆ ಮಾತನಾಡಿದ ಕಾರ್ಡಿಯಲ್ ಶಾಲೆಯ ಕಾರ್ಯದರ್ಶಿ ಎಂ.ಕೆ ನಂಜುಂಡಪ್ಪ, ಶಾಲೆಯ ವಿದ್ಯಾರ್ಥಿಗಳಿಗೆ ವ್ಯವಹಾರದ ಕುರಿತಾಗಿ ಸಾಮಾನ್ಯ ಪ್ರಜ್ಞೆ ಮತ್ತು ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಈ ರೀತಿಯ ಮೆಟ್ರಿಕ್ ಸಂತೆಯನ್ನ ಆಯೋಜಿಸಬೇಕು. ಇಲ್ಲಿ ಸ್ವತಃ ಮಕ್ಕಳೇ ಬೆಂಕಿಯನ್ನು ಬಳಸದೇಯೇ ಅಡುಗೆ ಮಾಡಿದರು ಜೊತೆಗೆ ಸಂತೆಯಲ್ಲಿ ತರಕಾರಿ ಮಾರಿರೋದು ಸಂತಸ ತಂದಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಡಿಯಲ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಈ ತರಹದ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಬೇಕೆಂದು ನಮ್ಮ ಶಾಲಾ ಶಿಕ್ಷಕ ವೃಂದದವರು ಇಂತಹ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಮಕ್ಕಳಿಗೆ ಅತಿ ಹೆಚ್ಚಿನ ಸಾಮಾನ್ಯ ಜ್ಞಾನ ನೀಡುವಂತಹ ಕಾರ್ಯಕ್ರಮಗಳನ್ನು ಕೊಡಿಸುವ ನಿಟ್ಟಿನಲ್ಲಿ ಶಾಲೆಯ ಎಲ್ಲ ವರ್ಗದವರು ಸಹಕರಿಸುತ್ತಿದ್ದಾರೆ ಎಂದರು.

Author:

...
Editor

ManyaSoft Admin

Ads in Post
share
No Reviews