ಮಧುಗಿರಿ - ಪೋಷಕರ ದಿನ ಆಚರಿಸುವ ಮೂಲಕ ಗಮನ ಸೆಳೆದ ಬ್ರೈಟ್ ಪಬ್ಲಿಕ್ ಸ್ಕೂಲ್

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಬ್ರೈಟ್‌ ಪಬ್ಲಿಕ್‌ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಬದಲು ಪೋಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಗಮನಸೆಳೆದಿದೆ. ಪೋಷಕರ ದಿನವನ್ನು  ಸಿಆರ್‌ಪಿ ಹನುಮಂತರಾಯಪ್ಪ ಉದ್ಘಾಟಿಸಿದ್ರು. ಕಾರ್ಯಕ್ರಮದಲ್ಲಿ ನಿಸರ್ಗ ಜ್ಞಾನ ಮಂದಿರ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ಶಾಲಾ ಸಂಸ್ಥಾಪಕರು, ಶಿಕ್ಷಕರು, ಶಾಲಾ ಮಕ್ಕಳು, ಪೋಷಕರು ಸೇರಿ ಸಾರ್ವಜನಿಕರು ಭಾಗಿಯಾಗಿದ್ರು.

 ಕಾರ್ಯಕ್ರಮದಲ್ಲಿ ಮಾತನಾಡಿದ ಸಿಆರ್‌ಪಿ ಹನುಮಂತರಾಯಪ್ಪ ಮಾತನಾಡಿ, ಪೋಷಕರು ಕುಟುಂಬದ ಅಡಿಪಾಯ. ಎಂಥದ್ದೇ ಪರಿಸ್ಥಿತಿ ಇರಲಿ ಅವರು ನಮ್ಮೊಂದಿಗೆ ಇರುತ್ತಾರೆ. ಪೋಷಕರ ಪ್ರೀತಿ, ಮಮಕಾರ, ಕಾಳಜಿ, ತ್ಯಾಗವನ್ನು ನೆನೆಯುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಪೋಷಕರ ಹಿರಿಮೆಗೆ ಗೌರವ ಸೂಚಿಸುವುದು ಈ ದಿನದ ಉದ್ದೇಶ ಉತ್ತಮವಾಗಿದೆ ಎಂದರು.

 ನಿಸರ್ಗ ಜ್ಞಾನ ಮಂದಿರ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವವರು ಪೋಷಕರು. ನಾವು ಇಂದು ಏನಾಗಿದ್ದೇವೆ ಅದು ನಮ್ಮ ಪೋಷಕರ ಕೊಡುಗೆಯಾಗಿದೆ. ಪೋಷಕರ ದಿನ ಆಚರಿಸುತ್ತಿರೋದು ವಿಶೇಷ ಎಂದ್ರು.

 ಇನ್ನು ಕಾರ್ಯಕ್ರಮದ ಬಗ್ಗೆ ಪೋಷಕರು ಮಾತನಾಡಿ, ಮಗು ತನ್ನ ಕಾಲ ಮೇಲೆ ನಿಂತು ಸ್ವತಂತ್ರ ಬದುಕನ್ನು ಕಂಡುಕೊಳ್ಳುವವರೆಗೆ ಪ್ರತಿ ಹಂತದಲ್ಲೂ ಪೋಷಕರು ಮಗುವನ ಬೆನ್ನ ಹಿಂದೆ ನೆರಳಾಗಿ ನಿಲ್ಲುತ್ತಾರೆ. ಇದೆ ಮೊದಲ ಬಾರಿ ಈ ಶಾಲೆಯಲ್ಲಿ ಹಮ್ಮಿಕೊಂಡಿದ್ದು ತುಂಬಾ ಅದ್ಭುತವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ರು

 

Author:

...
Editor

ManyaSoft Admin

share
No Reviews