TUMAKURU: ತುಮಕೂರಿನ ಕ್ಯಾತಸಂದ್ರ ಬಳಿ ಲಾರಿ ಸಂಪೂರ್ಣ ಸುಟ್ಟು ಭಸ್ಮ

ತುಮಕೂರು:

ಚಲಿಸುತ್ತಿದ್ದ ಲಾರಿವೊಂದರ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸ್ಥಳದಲ್ಲಿಯೇ ಲಾರಿ ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರಿನ ಕ್ಯಾತಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.

ದಾಬಸ್‌ಪೇಟೆಯಿಂದ ವಸಂತನರಸಪುರಾ ಕೈಗಾರಿಕಾ ಪ್ರದೇಶಕ್ಕೆ ತೆರಳುತ್ತಿದ್ದ ಲಾರಿಯ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿಯೇ ಲಾರಿ ನಡುರಸ್ತೆಯಲ್ಲೇ ಹೊತ್ತಿ ಉರಿದಿದೆ. ಇನ್ನು ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು  ಗಮನಿಸಿದ ಚಾಲಕ  ಕೂಡಲೇ ಲಾರಿಯಿಂದ  ಕೆಳಗಿಳಿದಿ ದ್ದಾನೆ. ನೋಡು ನೋಡುತ್ತಿದ್ದಂತೆ ಲಾರಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ಬೆಂಕಿಯ  ಅವಘಡದಲ್ಲಿ  ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೊತೆಗೆ ಲಾರಿಯು ಖಾಲಿಯಿದ್ದ ಕಾರಣ ಯಾವುದೇ ನಷ್ಟವಾಗಿಲ್ಲ ಎನ್ನಲಾಗಿದೆ.

ಬೇಸಿಗೆಯ ಬಿಸಿಲು ಕೆಲವು ಸಮಯ ಇಂತಹ ಅವಘಡಗಳು ಸಂಭವಿಸಲು ಕಾರಣವಾಗುತ್ತೆ. ಹಾಗಾಗಿ ಯಾವುದೇ ವಾಹನ  ಚಾಲಕರಾಗಲಿ ಸ್ವಲ್ಪ  ಎಚ್ಚರಿಕೆಯಿಂದ ಇರಬೇಕು.

Author:

...
Keerthana J

Copy Editor

prajashakthi tv

share
No Reviews