ಶಿರಾ:
ಅಧಿಕಾರಿಗಳು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸತಾಯಿಸುವುದು, ಡಿಮ್ಯಾಂಡ್ ಮಾಡುವುದು, ಸುಗಮ ಆಡಳಿತ ನೀ ಡುವಲ್ಲಿ ಭ್ರಷ್ಟಾಚಾರ ಮಾಡಿದ್ದು ಕಂಡು ಬಂದ್ರೆ ಅಂತಹವರ ವಿರುದ್ಧ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುತ್ತೆ ಅಂತ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್ ಶಿರಾದಲ್ಲಿ ಎಚ್ಚರಿಸಿದರು.
ಶಿರಾ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವಸರ್ಕಾರದ ಕೆಲಸ ದೇವರ ಕೆಲಸ . ಇಂದು ನಮಗೆ ಅಧಿಕಾರ ಸಿಕ್ಕಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆದನ್ನು ಬಿಟ್ಟು ಸಾರ್ವಜನಿಕರಿಗೆ ತೊಂದ್ರೆ ಕೊಡೊದು ಕಂಡುಬಂದ್ರೆ ಕಠಿಣ ಕೈಗೊಳ್ಳಲಾಗುತ್ತೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಕುಂದು ಕೊರತೆ ಸಭೆಯಲ್ಲಿ ಕೋಟೆ ಬಡಾವಣೆಯಲ್ಲಿನ ಪೂರ್ವಜರ ಸಮಾಧಿಗಳನ್ನು ಹೊಡೆದು ಹಾಕಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಭೂಗಳ್ಳರ ಮೇಲೆ ಕ್ರಮ ಕೈಗೊಂಡು, ಎಂದಿನಂತೆ ಸ್ಮಶಾನಕ್ಕೆ ಜಾಗವನ್ನು ಮೀಸಲಿಡುವಂತೆ ಬಡಾವಣೆಯ ವಾಸಿಗಳಾದ ತುಳಸೀರಾಂ ಸೇರಿದಂತೆ ಬಡಾವಣೆಯ ವಾಸಿಗಳು ಮನವಿ ಸಲ್ಲಿಸಿದರು.
ಇನ್ನು ಇದೇ ವೇಳೆ ಧಾರ್ಮಿಕ ದತ್ತಿ ಇಲಾಖೆ, ಖಾತೆ ಪಹಣಿ ಸೇರಿದ ದೂರುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಪರಿಹಾರಕ್ಕೆ ಲಕ್ಷ್ಮೀನಾರಾಯಣ್ ತಾಕೀತು ಮಾಡಿದ್ರು. ನಂತರ ನಗರಸಭೆ ವ್ಯಾಪ್ತಿಯಲ್ಲಿ ನಿಯಮ ಬಾಹೀರವಾಗುತ್ತಿರುವ ಬಹುಮಹಡಿ ಕಟ್ಟಡಗಳಿಗೆ ಒ ಸಿ ಮತ್ತು ವಿದ್ಯುತ್ ಸಂಪರ್ಕ ನೀಡುವ ಬಗ್ಗೆ 4 ದೂರುಗಳನ್ನ ಆಲಿಸಿದರು.
ಈ ಸಭೆಯಲ್ಲಿ ಸಭೆಗೆ ನಿಗದಿಪಡಿಸಿದ್ದ ಅಧಿಕಾರಿಗಳ ಬದಲು ಇತರೆ ಅಧಿಕಾರು ಬಂದಿದ್ದಕ್ಕೆ ಲೋಕಾಯುಕ್ತ ಲಕ್ಷ್ಮೀನಾರಾಯಣ್ ಗರಂ ಆದ ಘಟನೆ ಕೂಡ ನಡೆಯಿತು.ಈ ಸಂದರ್ಭದಲ್ಲಿ ಡಿ.ಎಸ್.ಪಿ ವೆಂಕಟೇಶ್, ಇನ್ಸ್ ಪೆಕ್ಟರ್ ರಾಜು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹರೀಶ್, ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಸಾರ್ವಜನಿಕರು ಹಾಜರಿದ್ದರು.