ರಾಜ್ಯ : ಕಲ್ಲು ಕ್ವಾರಿಯಲ್ಲಿ ಭೂಕುಸಿತ | ಐವರು ದಾರುಣು ಸಾವು

ರಾಜ್ಯ :  ಕ್ವಾರಿಯಲ್ಲಿ ಭೂಕುಸಿತ ಸಂಭವಿಸಿ 5 ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಶಿವಗಂಗೈನಲ್ಲಿರುವ ಸಿಂಗಂಪುನಾರಿ ಬಳಿಯ ಮಲ್ಲಕೊಟೈನಲ್ಲಿ ನಡೆದಿದೆ.

ಶಿವಗಂಗೈ ಜಿಲ್ಲೆಯ ಸಿಂಗಂಪುನಾರಿ ಬಳಿಯ ಮಲ್ಲಕೊಟ್ಟೈ ಗ್ರಾಮದಲ್ಲಿ ಖಾಸಗಿ ಒಡೆತನದ ಕ್ವಾರಿ ಕಾರ್ಯನಿರ್ವಹಿಸುತ್ತಿದೆ. 150 ಮೀಟರ್ ಆಳದ ಈ ಕ್ವಾರಿಯಲ್ಲಿ ಇಂದು ಭೂಕುಸಿತ ಸಂಭವಿಸಿದೆ. ಐವರು ಸಾವನ್ನಪ್ಪಿದ್ದು ಉಳಿದವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ. ಈಗಾಗಲೇ ಮಣ್ಣಿನಲ್ಲಿ ಹೂತು ಹೋಗಿರುವವರಲ್ಲಿ ಮೂವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಣ್ಣಿನಲ್ಲಿ ಹೂತು ಹೋದವರ ಹುಡುಕಾಟದಲ್ಲಿ ಅಧಿಕಾರಿಗಳು ಸಹತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗಣೇಶ್, ಮುರುಗಾನಂದಮ್, ಆರುಮುಗಂ, ಅರಿಜಿತ್ ಮತ್ತು ಆಂಡಿಚಾಮಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  ಗಂಭೀರವಾಗಿ ಗಾಯಗೊಂಡ ಮೈಕೆಲ್ ಎಂಬುವವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

 

Author:

...
Keerthana J

Copy Editor

prajashakthi tv

share
No Reviews