TURUVEKERE: ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ.. ವಿಶೇಷ ಚೇತನ ಆತ್ಮಹತ್ಯೆಗೆ ಯತ್ನ

ಅಧಿಕಾರದಲ್ಲಿದ್ದವರು. ದುಡ್ಡು ಇರುವವರು ಏನು ಬೇಕಾದ್ರು ಮಾಡಬಹುದು ಎಂಬ ಅಹಂನಲ್ಲೇ ಇದ್ದಾರೆ. ಆದ್ರೆ ಇವರು ಮಾಡಡುವ ವಂಚನೆಗೆ ಬಲಿಯಾಗೋದು ಮಾತ್ರ ಬಡವರು. ಏನು ಅರಿಯದ ಮುಗ್ದರು ಮತ್ತು ಅನಕ್ಷರಸ್ಥರು. ಇತ್ತೀಚಿನ ದಿನಗಳಲ್ಲಿ ರೈತರ ಜಮೀನುಗಳು ವಕ್ಫ್‌ ಗೆ ಸೇರುತ್ತಿದ್ದು ಅನೇಕ ಕಡೆ ರೈತರು ಭುಗಿಲೆದ್ದಿದ್ದಾರೆ. ಇಷ್ಟು ದಿನ ತಮ್ಮ ಹೆಸರಿನಲ್ಲಿರೋ ಜಮೀನು ಇದ್ದಕ್ಕಿದ್ದ ಹಾಗೆ ಬೇರೊಬ್ಬರ ಹೆಸರಿಗೆ ಅಥವಾ ವಕ್ಫ್‌ಗೆ ಸೇರ್ತಾ ಇದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತನ್ನ ಜಮೀನು ಬೇರೆಯವರ ಹೆಸರಲ್ಲಿದೆ ಎಂದು ತಿಳಿಯುತ್ತಿದ್ದಂತೆ ತಾಲೂಕು ಕಚೇರಿಯಲ್ಲಿ ಈ ಬಗ್ಗೆಇ ವಿಚಾರಿಸಿದ್ದಾರೆ.. ಆದ್ರೆ ಕಂದಾಯ ಇಲಾಖೆಯ ಅಧಿಕಾರಿಗಳು ತಕರಾರು ಅರ್ಜಿ ನೀಡಿದ್ರೆ ಕೋರ್ಟ್‌ಗೆ ಹೋಗುವಂತೆ ಉಡಾಫೆಯಾಗಿ ಉತ್ತರ ನೀಡ್ತಾ ಇದ್ದಾರಂತೆ. ಇದ್ರಿಂದ ಬೇಸತ್ತ ರೈತ, ವಿಶೇಷ ಚೇತನ ಜಯಕುಮಾರ್‌ ತಾಲೂಕು ಕಚೇರಿಯಲ್ಲೇ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇನ್ನು ದೊಡ್ಡಾಘಟ್ಟ ಗ್ರಾಮದ ವಿಶೇಷ ಚೇತನ ಜಯಕುಮಾರ್ ಅವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸಿಕೊಂಡು ಬರ್ತಾ ಇದ್ದು, ಜೀವನೋಪಾಯಕ್ಕಾಗಿ ಅಮ್ಮಸಂದ್ರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದು.. ಜಯಕುಮಾರ್‌ ಅವರ ತಂದೆ ಹೆಸರಲ್ಲಿ 1.02 ಗುಂಟೆ ಹಾಗೂ 11 ಗುಂಟೆ ಜಮೀನು ಇದ್ದು, ಇಷ್ಟು ದಿನ ಅವರ ತಂದೆ ಹೆಸರಲ್ಲೇ ದಾಖಲೆಗಳು ಬರ್ತಾ ಇದ್ದವು ಆದ್ರೆ ಕೆಲ ದಿನಗಳಿಂದ ಜಮೀನಿನ ದಾಖಲೆಗಳು ಕೃಷ್ಣಪ್ಪ ಹಾಗೂ ಗಂಗಮ್ಮ ಹೆಸರಿನಲ್ಲಿ ತೋರಿಸುತ್ತಿವೆ.

ಇದ್ರಿಂದ ಭೀತಿಗೊಳಗಾದ ಜಯಕುಮಾರ್‌ ಈ ಬಗ್ಗೆ ವಿಚಾರಿಸಿಲು ತಾಲೂಕು ಕಚೇರಿಯಲ್ಲಿ ಅಲೆದಾಡಿದ್ದಾರೆ… ಆದ್ರೆ ಅಧಿಕಾರಿಗಳು ಕೂಡ ಇವರಿಗೆ ಸಹಕರಿಸದಿದ್ದು, ಕೋರ್ಟ್‌ಗೆ ಹೋಗು ಅಂತಾ ಧಿಮಾಕಿನ ಮಾತಾಡಿದ್ದಾರೆ. ದಿನ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿ ಬೇಸತ್ತು ಕೊನೆಗೆ ಆತ್ಮಹತ್ಯೆಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಜಯಕುಮಾರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ನಾದ್ರು ರೈತ ಜಯಕುಮಾರ್‌ಗೆ ನ್ಯಾಯ ಸಿಗುತ್ತಾ ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews