ಕೊರಟಗೆರೆ:
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲದೇವಿ ಪುರ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗೆ ಹಾಗೂ ವಾಟರ್ ಮ್ಯಾನ್‌ಗಳಿಗೆ ಸುಮಾರು ತಿಂಗಳಿನಿಂದ ಸಂಬಳ ಕೊಟ್ಟಿಲ್ಲವಂತೆ. ಇನ್ನು ಸಂಬಳ ಇಲ್ಲದೇ ನಿತ್ಯ ಜೀವನ ಸಾಗಿಸಲು ಕಷ್ಟವಾಗ್ತಿದೆ ಎಂದು ಸಿಬ್ಬಂದಿ ಹಾಗೂ ವಾಟರ್ ಮ್ಯಾನ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೊಮ್ಮಲದೇವಿಪುರ ಗ್ರಾಮ ಪಂಚಾಯ್ತಿ ಸಿಬ್ಬಂದಿ ಮಂಗಳಮ್ಮ ಎಂಬುವವರಿಗೆ 14 ತಿಂಗಳ ವೇತನ ಹಾಗೂ 19 ಮಂದಿ ವಾಟರ್ ಮ್ಯಾನ್‌ಗೆ 20 ತಿಂಗಳಿನಿಂದ ಸಂಬಳ ಕೊಡಲು ಪಿಡಿಒ ಮೀನಾಮೇಷ ಎಣಿಸುತ್ತಿದ್ದು, ಪರದಾಡುವಂತಾಗಿದೆ.
ಗ್ರಾಮ ಪಂಚಾಯ್ತಿಯಲ್ಲಿ ವೇತನ ನೀಡ್ತಾ ಇಲ್ಲ ಎಂಬುದರ ಬಗ್ಗೆ ಗ್ರಾಮ ಪಂಚಾಯ್ತಿ ಸಿಬ್ಬಂದಿ ಮಂಗಳಮ್ಮ ಪ್ರಜಾಶಕ್ತಿ ಟಿವಿಯೊಂದಿಗೆ ಮಾತನಾಡಿದ್ದು, ನನ್ನ ಗಂಡ ಮೃತಪಟ್ಟ ನಂತರ ನಾನು ಕೇವಲ 300 ರೂಪಾಯಿಗೆ 2002 ರಿಂದಲೂ ಕೆಲಸ ಮಾಡ್ತಿದ್ದೇನೆ. ನನ್ನ ಗಂಡ ಮೃತಪಟ್ಟು 23 ವರ್ಷ ಕಳೆದರು, ಅವರ 12 ತಿಂಗಳ ಸಂಬಳ ಕೊಟ್ಟಿಲ್ಲ. ಜೊತೆಗೆ ನಾನು ಕೆಲಸ ಮಾಡಿರುವ 14 ತಿಂಗಳ ಸಂಬಳ ಬಾಕಿ ಇದೆ. ಗ್ರಾಮ ಪಂಚಾಯ್ತಿ ನೀಡುವ ಸಂಬಳದಿಂದಲೇ ನನ್ನ ಜೀವನ ಸಾಗಿಸಬೇಕಿದೆ. ಸಂಬಳವನ್ನೇ ಕೊಡದಿದ್ದರೇ ನಾನು ಜೀವನ ಮಾಡೋದು ಹೇಗೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಇನ್ನು ಈ ಬಗ್ಗೆ ಲಿಂಗದವೀರನಹಳ್ಳಿಯ ನೀರು ವಿತರಕ ಲಿಂಗರಾಜು ಮಾತನಾಡಿ, 2018ರ ಹಿಂದೆ 8 ತಿಂಗಳ ಸಂಬಳ ಬಾಕಿ ಇದೆ. 2018 ರಿಂದ 2022ರ ತನಕ ಅಂದರೆ ಸುಮಾರು 14 ತಿಂಗಳ ಸಂಬಳ ಕೊಡಬೇಕು. ಈಗ ಬಯೋಮೆಟ್ರಿಕ್ ಬಂದ ನಂತರ 4 ತಿಂಗಳ ಸಂಬಳ ಕೊಟ್ಟಿಲ್ಲ. ಗ್ರಾಪಂ ಪಿಡಿಓಗೆ ಕೇಳಿದರೇ ಅನುದಾನ ಲಭ್ಯವಿಲ್ಲ ಸರ್ಕಾರದಿಂದ ಬಂದ ನಂತರ ಕೋಡ್ತಿವಿ ಅಂತಾರೇ. ನಾವು ಏತಕಾದರೂ ಕೆಲಸಕ್ಕೆ ಸೇರಿದ್ವೋ ಅಂತಾ ಪ್ರಜಾಶಕ್ತಿ ಟಿವಿ ಮುಂದೆ ಅಳಲು ತೋಡಿಕೊಂಡರು.
ಪ್ರತಿನಿತ್ಯ ನಾವು ನೀರು ವಿತರಕನಾಗಿ ಕೆಲಸ ಮಾಡಬೇಕು. ನಮಗೇ ಬೇರೆ ಯಾವುದು ಆರ್ಥಿಕ ಲಾಭ ಇಲ್ಲ. ಸಂಬಳ ಇಲ್ಲದೇ ನಮ್ಮ ಜೀವನ ನಡೆಯೋದು ಹೇಗೆ. ನಮ್ಮ ಮಕ್ಕಳ ಶಿಕ್ಷಣದ ಹಣ ಕಟ್ಟಲು ಪರದಾಡುವ ದುಸ್ಥಿತಿ ನಮಗೆ ನಿರ್ಮಾಣ ಆಗಿದೆ ಎಂದರು.
ಸಿಬ್ಬಂದಿ ಹಾಗೂ ವಾಟರ್ ಮ್ಯಾನ್‌ಗಳಿಗೆ ನೀರು ಸಿಗದ ಬಗ್ಗೆ ಬಿ.ಡಿ ಪುರದ ಗ್ರಾಮ ಪಂಚಾಯ್ತಿ ಪಿಡಿಒ ಮಾತನಾಡಿ, ಗ್ರಾಮ ಪಂಚಾಯ್ತಿಯಲ್ಲಿ ಸಿಬ್ಬಂದಿ ಆಗಿರೋ ಮಂಗಳಮ್ಮನಿಗೆ 13 ತಿಂಗಳ ಸಂಬಳವನ್ನು ಸರ್ಕಾರ ಕೊಟ್ಟಿಲ್ಲ. ವಾಟರ್ ಮ್ಯಾನ್‌ಗಳ ಒಟ್ಟು 17 ತಿಂಗಳ ಸಂಬಳವು ಬಾಕಿ ಇದೆ. ಕಂದಾಯ ವಸೂಲಾತಿ ಮತ್ತು ಸರಕಾರದ ಅನುದಾನ ಬಳಸಿ ಇನ್ನೊಂದು ವಾರದೊಳಗೆ ಸಿಬ್ಬಂದಿಗಳಿಗೆ ಸಂಬಳ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಸ್ಪಷ್ಟಪಡಿಸಿದರು.