ಕೊರಟಗೆರೆ : ಕೊರಟಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಭೂತ | ತಹಶೀಲ್ದಾರ್ ಮಂಜುನಾಥ್ ಖಡಕ್ ವಾರ್ನಿಂಗ್

ಮೈಕ್ರೋ ಫೈನಾನ್ಸ್‌ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಾಲೂಕು ಆಡಳಿತ
ಮೈಕ್ರೋ ಫೈನಾನ್ಸ್‌ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಾಲೂಕು ಆಡಳಿತ
ತುಮಕೂರು

ಕೊರಟಗೆರೆ:

ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿಮೀರಿದ್ದು, ನಿನ್ನೆ ಓರ್ವ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದರೆ, ಕುರಂಕೋಟೆ ಗ್ರಾಮದಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ದಂಪತಿಯಿಬ್ಬರು ಊರನ್ನೇ ಬಿಟ್ಟು ಹೋಗಿದ್ದಾರೆ. ಈ ಎಲ್ಲಾ ಘಟನೆಗಳಿಂದ ಅಲರ್ಟ್‌ ಆದ ತಾಲೂಕು ಆಡಳಿತ ಇಂದು ತಾಲೂಕಿನಲ್ಲಿರೋ ಮೈಕ್ರೋ ಫೈನಾನ್ಸ್‌ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ತಹಶೀಲ್ದಾರ್‌ ಮಂಜುನಾಥ್‌, ಸಬ್ ಇನ್ಸ್ ಪೆಕ್ಟರ್ಸ್ ಗಳಾದ ಚೇತನ್ ಕುಮಾರ್, ಯೋಗೇಶ್, ರೇಣುಕಾ ಯಾದವ್, ಬಸವರಾಜು ಹಾಗೂ ತಾಲೂಕಿನ 20 ಮೈಕ್ರೋ ಫೈನಾನ್ಸ್‌ ಅಧಿಕಾರಿಗಳನ್ನು ಕರೆಯಲಾಗಿತ್ತು.

‌ಸಭೆಯಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳಿಗೆ ತಹಶೀಲ್ದಾರ್‌ ಖಡಕ್‌ ವಾರ್ನಿಂಗ್‌ ನೀಡಿದರು. ಇನ್ನು ಮುಂದೆ ಕಾನೂನು ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಸಾರ್ವಜನಿಕರ ಮನೆಗೆ ಹೋಗಿ ಮಾನಹಾನಿ ಮಾಡಿದರೆ ಫೈನಾನ್ಸ್ ಕಂಪನಿ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಮಂಜುನಾಥ್‌ ಎಚ್ಚರಿಕೆ ನೀಡಿದರು.

ಇನ್ನು ಫೈನಾನ್ಸ್‌ ಕಂಪನಿಗಳು ಆರ್‌ಬಿಐ ಮಾನದಂಡಗಳ ಅಡಿಯಲ್ಲಿ ಕಾನೂನು ರೀತಿಯಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳಬೇಕು. ಯಾವುದೇ ಸಾರ್ವಜನಿಕರು ಲೋನ್ ಕಟ್ಟಲು ಆಗದೇ ಇದ್ದಾಗ  ಅವರ ಮನೆಯ ಪರಿಸ್ಥಿತಿಗಳನ್ನು ಆಲಿಸಿ ಲೋನ್ ಕಟ್ಟಲು ಅವರಿಗೆ ಒಂದು ತಿಂಗಳ ಕಾಲ ಕಾಲವಕಾಶ ನೀಡಬೇಕು ಎಂದು ತಹಶೀಲ್ದಾರ್‌ ಮಂಜುನಾಥ್‌ ಸೂಚನೆ  ನೀಡಿದರು. ಜೊತೆಗೆ ಲೋನ್ ಮರುಪಾವತಿ ಮಾಡಲು ಶಕ್ತಿ ಇಲ್ಲದವರಿಗೆ ಲೋನ್ ಕೊಟ್ಟು ಹಿಂಸಿಸುವುದು ಸರಿಯಲ್ಲ. ಈ ರೀತಿ ಮಾಡಿದರೆ ನಿಮ್ಮ ಮೇಲೆ ಕೇಸ್‌ ಹಾಕುತ್ತೇವೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

Author:

share
No Reviews