ಕೊರಟಗೆರೆ : ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ದಲಿತ ಕುಟುಂಬಗಳ ಆಹೋರಾತ್ರಿ ಧರಣಿ

ಕೊರಟಗೆರೆ : 

ಬಿಸಿಲು, ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಮಗೆ ನ್ಯಾಯ ಬೇಕು ಅಂತಾ ಬೀದಿಯಲ್ಲಿ ದಲಿತ ಕುಟುಂಬಗಳು ಆಹೋರಾತ್ರಿ ಧರಣಿ ನಡೆಸುತ್ತಿವೆ. ಮಕ್ಕಳು ಮರಿಯೊಂದಿಗೆ ಹಗಲು, ರಾತ್ರಿಯನ್ನದೆ ರಸ್ತೆಯಲ್ಲಿಯೇ ಮಲಗಿ ಸೂರಿಗಾಗಿ ಅಂಗಲಾಚುತ್ತಿದ್ದಾರೆ. ಪರಮೇಶ್ವರ್‌ ಸಾಹೇಬರೆ ಬನ್ನಿ ಅವತ್ತು ಓಟ್‌ ಹಾಕಿಸಿಕೊಂಡು ಮನೆ ಕೊಡ್ತಿವಿ ಅಂತ ಮಾತ್‌ ಕೊಟ್ಟಿದ್ರಿ, ನಮ್‌ ಕೈಗೆ ಜಾಗ ಇದೇ ಅಂತ ಹೇಳಿ ಹಕ್ಕುಪತ್ರ ಕೊಟ್ಟಿದ್ರಿ. ಆದರೆ ಈಗ ಪೊಲೀಸ್‌ ನವರು, ಸ್ಥಳೀಯರು ನಮಗೆ ಮನೆ ಕಟ್ಟೋಕೆ ಬಿಡ್ತಿಲ್ಲ. ಗಲಾಟೆ ಮಾಡ್ತಿದ್ದಾರೆ. ಕೇಸ್‌ ಹಾಕಿಸುತ್ತಿದ್ದಾರೆ. ಮಕ್ಕಳು ಮರಿ ಕಟ್ಕೊಂಡು ನಾವು ಬೀದಿಲಿ ಇದ್ದೀವಿ. ಎಲ್ಲಿದಿರ ಬನ್ನಿ ಸ್ವಾಮಿ ನಮ್ಗೆ ನ್ಯಾಯ ಕೊಡ್ಸಿ ಅಂತ ಕೇಳ್ತಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾದ ಡಾ.ಜಿ.ಪರಮೇಶ್ವರ್‌ ಬಡಾವಣೆಯಲ್ಲಿ ನಮ್ಮ ಸೈಟ್‌ ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡಿ ಅಂತ ದಲಿತರು ಕೇಳ್ತಿದ್ದಾರೆ. ಇಲ್ಲಿ ಸುಮಾರು 40 ದಲಿತ ಕುಟುಂಬಗಳು ಹಲವು ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ಜೀವ ನಡೆಸುತ್ತಿರ್ತಾರೆ. ಇಂತಹ ಸಮಯದಲ್ಲಿ ಪರಮೇಶ್ವರ್‌ ಅವರು ಅಲ್ಲಿಗೆ ಎಂಟ್ರಿಕೊಡ್ತಾರೆ. ನಾನು ನಿಮ್ಗೆ ಜಾಗ ಕೊಡ್ತಿನಿ ಮತ ಹಾಕಿ ಅಂತ ಕೇಳಿಕೊಂಡಿದ್ರಂತೆ. ಅದರಂತೆ ದಲಿತ ಕುಟುಂಬಗಳು  ಓಟ್‌ ಹಾಕಿದ್ದು, ಪರಮೇಶ್ವರ್‌ ಹಕ್ಕುಪತ್ರ ವಿತರಿಸಿದ್ದಾರೆ.

2023 ರ ಚುನಾವಣೆ ಗೆದ್ದ ನಂತರ ಪರಮೇಶ್ವರ್‌ ಸಾಹೇಬರು ಕೋರಾದಲ್ಲಿ ವಾಸವಿದ್ದ 40 ಕುಟುಂಬಳಿಗೆ ಮಾರ್ಚ್‌ 4, 2023 ರಂದು ಕೊಟ್ಟ ಮಾತಿನಂತೆ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದರಂತೆ. ಅದನ್ನೇ ನಂಬಿದ್ದ ಜನ ಹಕ್ಕುಪತ್ರ ಸಿಕ್ತು ನಮಗೆ ಸೂರಾಯ್ತು ಅಂತ ಖುಷಿಪಟ್ಟಿದ್ದರು. ಆದರೆ ಈಗ ಆ ಜಾಗದಲ್ಲಿ ಮನೆ ಕಟ್ಟೋಕೆ ಮೇಲ್ವರ್ಗದ ಜನರ ಬಿಡ್ತಿಲ್ವಂತೆ, ಆ ಹಕ್ಕುಪತ್ರ ನಕಲಿ ಅಂತ ಗೇಲಿ ಮಾಡ್ತಿದ್ದಾರಂತೆ. ಸವರ್ಣೀಯರ ತೊಂದರೆ ಒಂದು ಕಡೆಯಾದರೆ ಪೊಲೀಸ್‌ ಅವರ ಕಾಟ ಮತ್ತೊಂದು ಕಡೆ, ಪರಮೇಶ್ವರ್‌ ಸಾಹೇಬರು ಹಕ್ಕುಪತ್ರ ಕೊಟ್ಟರು ನಮಗೆ ಮನೆ ಕಟ್ಟೋಕೆ ಜನ ಬಿಡ್ತಿಲ್ಲ. ನಮಗೆ ಬಂದಿರೋ ಜಾಗದಲ್ಲಿಯೇ ರೋಡ್‌ ಮಾಡ್ತಿದ್ದಾರೆ. ನಾವು ಏನ್‌ ಮಾಡಬೇಕು. ಪರಮೇಶ್ವರ್‌ ಅವರೆ ಖುದ್ದಾಗಿ ಬಂದು ನಮಗೆ ನ್ಯಾಯ ಕೊಡಿಸಬೇಕು ಅಂತ ದಲಿತ ಕುಟುಂಬಗಳು ಗೋಳಿಡುತ್ತಿವೆ.

ಇನ್ನು ಹಕ್ಕುಪತ್ರದಂತೆ ನಮಗೆ ನಮ್ಮ ಜಾಗವನ್ನು ಅಳತೆ ಮಾಡಿ, ಹದ್ದುಬಸ್ತು ಮಾಡಿಕೊಡುವಂತೆ 40 ದಲಿತ ಕುಟುಂಬಗಳು ಗೃಹ ಸಚಿವರನ್ನು ಅಂಗಲಾಚುತ್ತಿದ್ದು, ಬೀದಿಯಲ್ಲಿ ಕೂತು ನ್ಯಾಯಕ್ಕಾಗಿ ಹೋರಾಟ ನಡೆಸ್ತಿದ್ದಾರೆ. ಖುದ್ದು ಗೃಹ ಸಚಿವರೇ ಬಂದು ಮುಂದೆ ನಿಂತು ನಮಗೆ ಬಂದಿರುವ ಸೈಟ್‌ಗಳನ್ನು ಅಳತೆ ಮಾಡಿಸಿ, ಹದ್ದುಬಸ್ತು ಮಾಡಿಸಿಕೊಡಬೇಕು ಅಂತ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews