ಕೊರಟಗೆರೆ : ಕೊರಟಗೆರೆಯಲ್ಲಿ ಕರಡಿ ಪ್ರತ್ಯಕ್ಷ | ಗ್ರಾಮಸ್ಥರಲ್ಲಿ ಆತಂಕ

ಕರಡಿ ಪ್ರತ್ಯಕ್ಷವಾಗಿರುವುದು.
ಕರಡಿ ಪ್ರತ್ಯಕ್ಷವಾಗಿರುವುದು.
ತುಮಕೂರು

ಕೊರಟಗೆರೆ:

ಮನುಷ್ಯನ ಅತಿಯಾಸೆಯಿಂದಾಗಿ ಇಂದು ಕಾಡು ನಾಶವಾಗುತ್ತಿದೆ. ಮತ್ತೊಂದೆಡೆ ಕಾಡಿನಲ್ಲಿ ಸಿಗುತ್ತಿದ್ದ ಆಹಾರ ತಿಂದು ಹೇಗೋ ಜೀವಿಸುತ್ತಿದ್ದ ಪ್ರಾಣಿಗಳು ಆಹಾರ ಅರಸುತ್ತ ಕಾಡಿನಿಂದ ನಾಡಿನತ್ತ ಬರುತ್ತಿವೆ. ಕೊರಟಗೆರೆಯ 15 ನೇ ವಾರ್ಡ್‌ನ ವಾಲ್ಮೀಕಿ ನಗರದಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಕರಡಿಯೊಂದು ರಸ್ತೆ ದಾಟುತ್ತಿದ್ದನ್ನು ಕಂಡು ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.

ಪಟ್ಟಣದ ವಾಲ್ಮೀಕಿ ನಗರದಲ್ಲಿ ಕರಡಿಯೊಂದು ರಸ್ತೆ ದಾಟುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಮನೆಯ ಮುಂದೆಯೇ ಕರಡಿ ರಸ್ತೆ ದಾಟುತ್ತಿರುವುದನ್ನು ಕಂಡು ಒಂದು ಕ್ಷಣ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕರಡಿ ಕಂಡ ಜನ ಹೊರಬರಲಾಗದೆ ಕಂಗಾಲಾಗಿದ್ದಾರೆ. ಅಲ್ಲದೇ ಕರಡಿಗಳು ಪಟ್ಟಣಕ್ಕೆ ಬರದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews