ಗುಬ್ಬಿ:
ತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ತೋಟದ ಮನೆಗೆ ನುಗ್ಗಿದ ಚಿರತೆಯೊಂದು ಎರಡು ವರ್ಷದ ಸೀಮೆ ಕರುವನ್ನು ಭಕ್ಷಿಸಿ ಹೋಗಿದೆ. ಈ ಘಟನೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಕರೇಗೌಡನ ಪಾಳ್ಯದಲ್ಲಿ ನಡೆದಿದೆ, ಚಿರತೆ ದಾಳಿಯಿಂದಾಗಿ ಕರೇಗೌಡನ ಪಾಳ್ಯ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಕರೇಗೌಡನ ಪಾಳ್ಯ ಗ್ರಾಮದ ಶಿವಕುಮಾರ್ ಎಂಬುವವರ ತೋಟದ ಮನೆಯ ದನದ ಕೊಟ್ಟಿಗೆಗೆ ಏಕಾಏಕಿ ಚಿರತೆಯೊಂದು ನುಗ್ಗಿದ್ದು, ಕೊಟ್ಟಿಗೆಯಲ್ಲಿದ್ದ ಎರಡು ವರ್ಷದ ಕರುವಿನ ಮೇಲೆ ಅಟ್ಯಾಕ್ ನಡೆಸಿದ್ದು, ಕರುವಿನ ಕುತ್ತಿಗೆ ಹೊಟ್ಟೆ ಬಗೆದು ಭಕ್ಷಿಸಿದೆ. ಕರು ಸಾವನ್ನಪ್ಪಿದ್ದಕ್ಕೆ ರೈತ ಶಿವಕುಮಾರ್ ಕುಟುಂಬ ಕಣ್ಣೀರಾಕುತ್ತಿದ್ದಾರೆ.
ಇನ್ನು ಈಗಾಗಲೇ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ತೋಟದ ಮನೆಯ ಸಮೀಪದಲ್ಲಿ ಬೋನು ಇರಿಸಲಾಗಿದೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ಚಿರತೆ ಕಾಟದಿಂದ ಮುಕ್ತಿ ಕೊಡಿಸುವಂತೆ ಸ್ಥಳೀಯರು ಆಗ್ರಹಿಸ್ತಾ ಇದ್ದಾರೆ.