Kitchen Tips :
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬೇಸಿಗೆ ಕಾಲದಲ್ಲಿ ಆಹಾರ ಹಾಳಾಗುವ ಸಾಧ್ಯತೆಯೇ ಹೆಚ್ಚು ಆಹಾರದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ತ್ವರಿತ ಬೆಳವಣಿಗೆಯಿಂದಾಗಿ ಆಹಾರ ಕೆಡುತ್ತೇ. ಆದ್ರೆ ಆಹಾರವನ್ನ ಕೆಲವರು ಕೆಡದಂತೆ ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಮನೆಯಲ್ಲಿ ಫ್ರಿಡ್ಜ್ ಇಲ್ಲದವರು ಬೇರೆ ವಿಧಾನದ ಮೂಲಕ ಆಹಾರವು ಕೆಡದಂತೆ ಉಳಿಸಬಹುದು.
ಬೇಸಿಗೆಯಲ್ಲಿ ಹೆಚ್ಚು ಮಸಾಲೆಗಳನ್ನ ಬಳಸುವ ಆಹಾರಗಳು ಬೇಗನೇ ಕೆಟ್ಟು ಹೋಗುತ್ತವೆ. ಹೀಗಾಗಿ ಈ ಕಾಲದಲ್ಲಿ ಕಡಿಮೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು. ಆಗ ಆಹಾರ ಬೇಗನೇ ಹಾಳಾಗುವುದಿಲ್ಲ.
ಟೊಮ್ಯಾಟೊ ಮತ್ತು ಈರುಳ್ಳಿ ಇಲ್ಲದೆ ಅಡುಗೆ ಮಾಡುವುದು ಅಷ್ಟು ರುಚಿಯಾಗಿರುವುದಿಲ್ಲ. ಆದರೆ ಬೇಯಿಸಿದ ಆಹಾರವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ ಇದರ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಒಂದು ವೇಳೆ ಈ ಈರುಳ್ಳಿ ಹಾಗೂ ಟೊಮೆಟೊ ಬೇಕು ಎನ್ನುವಂತಿದ್ದರೆ ಅಡುಗೆ ಮಾಡಿದ ಎರಡರಿಂದ ರಿಂದ ಮೂರು ಗಂಟೆಯೊಳಗೆ ಆಹಾರವನ್ನು ಸೇವಿಸುವುದು ಒಳ್ಳೆಯದು.
ಕೆಲವರಿಗೆ ಬಿಸಿ ಬಿಸಿ ಆಹಾರವನ್ನು ತಿನ್ನುವ ಅಭ್ಯಾಸವಿರುತ್ತದೆ. ಹೀಗಾಗಿ ಆಹಾರವನ್ನು ತಿನ್ನುವ ಮೊದಲು ಬಿಸಿ ಮಾಡುತ್ತಾರೆ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರ ರುಚಿಯು ಕಡಿಮೆಯಾಗುವುದಲ್ಲದೆ ಬೇಗನೇ ಹಾಳಾಗುತ್ತದೆ. ಕೆಲವರಿಗೆ ವಿವಿಧ ರೀತಿಯ ಪದಾರ್ಥಗಳನ್ನು ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಆಹಾರವು ಬೇಗನೇ ಕೆಡುವ ಸಾಧ್ಯತೆಯಿರುತ್ತದೆ