KITCHEN- ತಂಬಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು

ತಂಬಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು

1 ಕಪ್‌ ಅಕ್ಕಿ

1ವರೆ ಕಪ್‌ ಪುಡಿ ಬೆಲ್ಲ

1/2 ಕಪ್‌ ಹುರಿದುರುವ ಕಡಲೇಬೀಜ

*ಸ್ವಲ್ಪ ಏಲಕ್ಕಿ ಪುಡಿ

*ಬಿಳಿ ಎಳ್ಳು ೨ ಚಮಚ

1ಚಮಚ ಗಸಗಸೆ

6 ಚಮಚ ಹುರಿಗಡಲೆ

1 ಕಪ್‌ ಗೊಬ್ಬರಿ ಪುಡಿ

 

ತಂಬಿಟ್ಟು ಮಾಡುವ ವಿಧಾನ:

ಒಂದು ಪ್ಯಾನ್‌ಗೆ ೧ ಕಪ್‌ ಬೆಲ್ಲ ಮತ್ತು ಬೆಲ್ಲ ಮುಳುಗುವಷ್ಟು ನೀರು ಹಾಕಿ ಪಾಕ ಮಾಡಿಕೊಳ್ಳಿ. ನಂತರ ೧ ಕಪ್‌ ಅಕ್ಕಿಯನ್ನು ೫ ನಿಮಿಷ ಹುರಿದುಕೊಳ್ಳಿ. ಎಳ್ಳು ಮತ್ತು ಗಸಗಸೆ ಹುರಿದುಕೊಳ್ಳಿ. ಜಾರಿಗೆ ಹುರಿದುಕೊಂಡಿರುವ ಅಕ್ಕಿ ಮತ್ತು ಕಡಲೇಯನ್ನು ಹಾಕಿ ಪೌಡರ್‌ ಮಾಡಿಕೊಳ್ಳಿ. ನಂತರ ಹುರಿದಿರುವ ಕಡೆಲೇ ಬೀಜವನ್ನು ಸ್ವಲ್ಪ ಪುಡಿ ಮಾಡಿಕೊಳ್ಳಿ. ಒಂದು ಬೌಲ್‌ ಹುರಿದಿರುವ ಎಲ್ಲಾ ಪರಾರ್ಥ ಮತ್ತು ಗೊಬ್ಬರಿ ಪುಡಿ, ಏಲಕ್ಕಿ ಪುಡಿ, ಸ್ವಲ್ಪ ಕಡ್ಲೆ  ಹಾಕಿ ಮಿಕ್ಸ್‌ ಮಾಡಿ ನಂತರ ಬೆಲ್ಲದ ಪಾಕವನ್ನು  ಹಾಕಿ ಉಂಡೆಕಟ್ಟಿಕೊಳ್ಳಿ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಿ ತಂಬಿಟ್ಟು.

Author:

...
Editor

ManyaSoft Admin

share
No Reviews