ಕೇರಳ:
ತನ್ನ ತಾಯಿ ಸೇರಿದಂತೆ ತನ್ನ ಕುಟುಂಬದ ಐದು ಮಂದಿಯನ್ನು ಹತ್ಯೆಗೈದಿದ್ದೇನೆ ಎಂದು ಯುವಕನೊಬ್ಬ ವೆಂಜಾರಮೂಡು ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದ ವೆಂಜಾರಮೂಡುವಿನಲ್ಲಿ ನಡೆದಿದೆ.
ಪೆರುಮಳದ ನಿವಾಸಿ 23 ವರ್ಷದ ಅಫನ್ ಎಂಬಾತ ಆರೋಪಿಯಾಗಿದ್ದಾನೆ. ಈತ ವೆಂಜಾರಮೂಡು ಪೊಲೀಸ್ ಠಾಣೆಗೆ ತೆರಳಿ ನಾನು ನನ್ನ ತಾಯಿ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಗೆಳತಿಯನ್ನು ಮೂರು ನಿವಾಸಿಗಳಲ್ಲಿ ಹತ್ಯೆಗೈದಿದ್ದೇನೆ ಎಂದು ಹೇಳಿದ್ದಾನೆ.
ನೆನ್ನೆ ಸಂಜೆ ಪಂಗೋಡೆಯಲ್ಲಿರುವ ಅಜ್ಜಿ ಸಲ್ಮಾ ಬೀವಿ (88) ಯನ್ನು ಕೊಚ್ಚಿ ಕೊಲೆ ಮಾಡಿ. ನಂತರ ಎಸ್,ಎನ್ ಪುರಂ ನಲ್ಲಿರುವ ಚಿಕ್ಕಪ್ಪನ ನಿವಾಸಕ್ಕೆ ಹೋಗಿ ಅಲ್ಲಿ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಹೀದಾರನ್ನು ಕೊಂದು ಕೊನೆಗೆ ಪೆರುಮಳದಲ್ಲಿರುವ ತನ್ನ ನಿವಾಸಕ್ಕೆ ತೆರಳಿ ಆತನ ಸಹೋದರ ಅಫ್ಸಾನ್ (14) ಹಾಗೂ ತಾಯಿ ಶೆಮಿ ಮತ್ತು ಗೆಳತಿ ಫರ್ಸಾನಾ ಮೇಲೆ ದಾಳಿ ನಡೆಸಿದ್ದಾನೆ, ಗಂಭೀರವಾಗಿ ಗಾಯಗೊಂಡಿದ್ದ 6 ಜನರ ಪೈಕಿ ಐದು ಮಂದಿ ಸಾವನ್ನಪ್ಪಿದ್ದು, ಆತನ ತಾಯಿ ಶೆಮಿ ಸದ್ಯ ಗೋಕುಲಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಇನ್ನು ಆರೋಪಿಯು ಪೊಲೀಸ್ ಠಾಣೆಗೆ ತೆರಳುವುದಕ್ಕೂ ಮುನ್ನ ವಿಷ ಸೇವಿಸಿದ್ದು, ಆತನನ್ನು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಆರೋಪಿಯು ನನಗೆ ಹಣಕಾಸು ನೀಡಲು ಸಂಬಂಧಿಕರು ನಿರಾಕರಿಸಿದ್ದರಿಂದ, ಎಲ್ಲರನ್ನು ಸಾಮೂಹಿಕವಾಗಿ ಹತ್ಯೆಗೈದೆ ಎಂದು ಪೊಲೀಸರಿಗೆ ಅಫನ್ ಹೇಳಿಕೆ ನೀಡಿದ್ದಾನೆ.