Kash Patel: ಭಾರತ ಮೂಲದ ಕಾಶ್‌ ಪಟೇಲ್ ಅಮೆರಿಕ FBI ನಿರ್ದೆಶಕರಾಗಿ ಆಯ್ಕೆ

ಕಾಶ್‌ ಪಟೇಲ್
ಕಾಶ್‌ ಪಟೇಲ್
ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ ಅವರ ಆಪ್ತ ಹಾಗೂ ಭಾರತ ಮೂಲದ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇದು ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿನ ಪ್ರಮುಖ ಬದಲಾವಣೆ ಎಂದು ಪರಿಗಣಿಸಲಾಗುತ್ತಿದೆ.

ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿತು. ಕಾಶ್ ಪಟೇಲ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘‘ಎಫ್ಬಿಐನ 9ನೇ ನಿರ್ದೇಶಕರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆಗೆ ಧನ್ಯವಾದಗಳು. ಅಮೆರಿಕದ ಜನರಿಗೆ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್ಬಿಐ ಅಗತ್ಯವಿದೆ’’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಮಾಡಿದ್ದಾರೆ.

ಕಾಶ್ ಪಟೇಲ್ ಗುಪ್ತಚರ ಕುರಿತ ಸದನದ ಶಾಶ್ವತ ಆಯ್ಕೆ ಸಮಿತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಹಿರಿಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಕಾಶ್ ಪಟೇಲ್ ಅಮೆರಿಕದ ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಕೊಲೆ, ಕಳ್ಳಸಾಗಣೆ ಮುಂತಾದ ಪ್ರಕರಣಗಳಲ್ಲಿ ಹೋರಾಡಿದ್ದಾರೆ. ಇವರು ಟ್ರಂಪ್ ಅವರ ದೊಡ್ಡ ಅಭಿಮಾನಿ ಆಗಿದ್ದಾರೆ. ಪಟೇಲ್ ಅವರನ್ನು "ಅಮೆರಿಕದ ಮೊದಲ ಹೋರಾಟಗಾರ" ಎಂದು ಹೊಗಳಿದ್ದ ಡೊನಾಲ್ಡ್ ಟ್ರಂಪ್, ಸೆನೆಟ್ನಲ್ಲಿ ನಾಮನಿರ್ದೇಶನ ಅನುಮೋದನೆಗೊಂಡ ನಂತರ ಅಭಿನಂದನೆ ಸಲ್ಲಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews