ಕಲಬುರಗಿ : ಲಾರಿ ಹಾಗೂ ಬೈಕ್‌ ನಡುವೆ ಡಿಕ್ಕಿ | ಬೈಕ್‌ ಸವಾರ ಸಾವು..!

ಕಲಬುರಗಿ:

ಬೈಕ್‌ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ ಕ್ರಾಸ್‌ ಬಳಿಯ ನಡುವಿನಹಳ್ಳಿಗೆ ಹೋಗುವ ಅರವತ್ತು ರೂಪಾಯಿ ಹೊಲದ ಹತ್ತಿರ ನಡೆದಿದೆ.

ಮೃತನನ್ನು ನಡುವಿನಹಳ್ಳಿ ಗ್ರಾಮದ ಮಂಜುನಾಥ ಆಂದೋಲಾ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಬೈಕ್‌ ನಲ್ಲಿ ಶಹಾಬಾದ ಕ್ರಾಸ್ ನಿಂದ ನಡುವಿನಹಳ್ಳಿಗೆ ಹೋಗುತ್ತಿದ್ದಾಗ, ನಡುವಿನಹಳ್ಳಿ ರಸ್ತೆಯಲ್ಲಿ ಬರುವ ಅರವತ್ತು ರೂಪಾಯಿ ಹೊಲದ ಹತ್ತಿರ ಶಹಾಬಾದ ಕಡೆಯಿಂದ
ಕಲಬುರಗಿ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಮೃತನ ಪತ್ನಿ ವಿಜಯಲಕ್ಷೀ ಅವರು ಲಾರಿ ಚಾಲಕ ಮಹಮ್ಮದ್ ಯುಸೂಫ್ ವಿರುದ್ಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ದೂರು ಸಲ್ಲಿಸಿದ್ದಾರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Author:

share
No Reviews