ಕಲಬುರಗಿ : ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಪ್ರೇಮಿಗಳು

ಕಲಬುರಗಿ:

ಒಂದೇ ನೇಣಿನ ಹಗ್ಗಕ್ಕೇ ಅಪ್ರಾಪ್ತ ಪ್ರೇಮಿಗಳಿಬ್ಬರು ಶಾಲಾ ಸಮವಸ್ತ್ರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವಂತಹ ದುರಂತ ಘಟನೆ ಕಲಬುರಗಿಯ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಳಗೇರಿ ಗ್ರಾಮದಲ್ಲಿ ನಡೆದಿದೆ.

ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ನಿವಾಸಿಗಳಾದ ಮಾಳಪ್ಪಾ (16) ಮತ್ತು ನಸೀಮಾ (16) ಆತ್ಮಹತ್ಯಗೆ ಶರಣಾದ ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಮಳ್ಳಿ ಗ್ರಾಮದಲ್ಲಿ ಎಸ್‌ ಎಸ್‌ ಎಲ್‌ ಸಿ ಓದುತ್ತಿದ್ದ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಬೇರೆ ಧರ್ಮದವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು, ಆದರೆ ಅನ್ಯಕೋಮಿನ ಅಪ್ರಾಪ್ತರ ಪ್ರೀತಿಗೆ ಎರಡು ಮನೆಯಲ್ಲಿ ಪೋಷಕರು ಒಪ್ಪದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯಡ್ರಾಮಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

 

Author:

...
Editor

ManyaSoft Admin

Ads in Post
share
No Reviews