ಶಿರಾ:
ಶಿರಾ ತಾಲೂಕು ಬರದ ತಾಲೂಕಿಗೆ ಸೇರಲ್ಪಟಿದ್ದು, ಜಾಲಿ ಗಿಡಗಳು ಬೆಳೆದು ನಿಂತಿವೆ. ಖಾಲಿ ಜಾಗಗಳಲ್ಲಿ ಜಾಲಿಗಿಡಗಳು ಬೆಳೆದು ನಿಂತಿದ್ದು ಇಲ್ಲಿನ ಜನರಿಗೆ ಸಾಕಷ್ಟು ತೊಂದ್ರೆಯನ್ನು ಉಂಟು ಮಾಡುತ್ತಿವೆ. ಶಿರಾ ತಾಲೂಕಿನ ಬುಕ್ಕಾಪಟ್ಟಣ ವ್ಯಾಪ್ತಿಯ ರಾಮಲಿಂಗಾಪುರ ಕೆರೆ ಏರಿ ಮೇಲಿನ ರಸ್ತೆಯಲ್ಲಿ ದಟ್ಟವಾಗಿ ಜಾಲಿ ಗಿಡ- ಗಂಟೆಗಳು ಬೆಳೆದು ನಿಂತಿದ್ದು ಬಲಿಗಾಗಿ ಕಾಯ್ತಾ ಇವೆ. ಕೆರೆಯ ಏರಿ ಬೀಸುವ ಸುಳಿ ಗಾಳಿಗೆ ಶಬ್ದಕ್ಕೆ ಎದೆ ಝಲ್ ಎನ್ನುವಂತಿದೆ.
ನಿತ್ಯ ಈ ರಸ್ತೆಯಲ್ಲಿ ನೂರಾರು ಮಂದಿ ರೈತರು, ಕೂಲಿ ಕಾರ್ಮಿಕರು ಬೈಕ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಗೆ ಚಾಚಿದಜಾಲಿ ಗಿಡಗಳ ರೆಂಬೆಗಳು, ರಸ್ತೆ ಬದಿ ದಟ್ಟವಾಗಿ ಬೆಳೆದಿರೋದ್ರಿಂದ ಬೈಕ್‌ಗಳಲ್ಲಿ ಸವಾರರು ಬಿದ್ದು ಕೂ ಕಾಲು ಮುರಿದು ಕೊಳ್ತಾ ಇದ್ದಾರೆ. ನಿನ್ನೆ ರಾಮಲಿಂಗಾಪುರ ಕೆರೆ ಏರಿ ಮೇಲೆ ಗಿಡ ಗಂಟೆಗಳು ಬೆಳೆದು ಅಪಘಾತ ಸಂಭವಿಸಿ ಬೈಕ್ ಸವಾರ ಆಸ್ಪತ್ರೆ ಸೇರಿದ್ದಾರೆ. . ಹೀಗಾಗಿ ಅಧಿಕಾರಿಗಳು ಇತ್ತ ಗಮನ ಹರಿಸಿ ಜಾಲಿ ಗಿಡಗಳನ್ನು ಕತ್ತರಿಸುವ ಮೂಲಕ ಪ್ರಯಾಣಿಕರ ಪ್ರಾಣವನ್ನು ರಕ್ಷಣೆ ಮಾಡಬೇಕಿದೆ.