ತಿಪಟೂರು : ನಾಳೆ ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ

ತಿಪಟೂರು : ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಮತ್ತು ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಪ್ಲೇಜೆಂಟ್ ಸೇಲ್ IQAC ಆಯೋಜಿಸಿರುವ 2025ನೇ ಸಾಲಿನ ಬೃಹತ್ ಉದ್ಯೋಗ ಮೇಳ ನಡೆಯಲಿದೆ.

ಈ ಮಹತ್ವದ ಉದ್ಯೋಗ ಮೇಳದಲ್ಲಿ 30ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸುತ್ತಿದ್ದು, ಸುಮಾರು 5000 ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮವನ್ನು ತಿಪಟೂರಿನ ಶಾಸಕರಾದ ಶ್ರೀ ಕೆ. ಷಡಕ್ಷರಿ ಅವರು ಉದ್ಘಾಟಿಸಲಿದ್ದಾರೆ.

SSLC, PUC, ಪದವಿ ಕೊನೆಯ ವರ್ಷದ ವಿದ್ಯಾರ್ಥಿಗಳು, BA, B.Sc., B.Com., ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಜೊತೆಗೆ 2023-24ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಗೂ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ.

ಇನ್ನು ಭಾಗವಹಿಸುವ ವಿದ್ಯಾರ್ಥಿಗಳು ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು:

  • SSLC / PUC ಮಾರ್ಕ್ಸ್ ಕಾರ್ಡ್
  • ಪಾಸ್‌ಪೋರ್ಟ್ ಸೈಜಿನ ಕಲರ್ ಫೋಟೋಗಳು
  • ಆಧಾರ್ ಕಾರ್ಡ್ ಪ್ರತಿಗಳು
  • ಕೊನೆಯ ವರ್ಷದ ಅಂಕಪಟ್ಟಿ
  • 20 ಪ್ರತಿಗಳ ರೆಸ್ಯೂಮ್ (Resume)

ಇನ್ನು ಈ ಉದ್ಯೋಗ ಮೇಳವು ಸ್ಥಳೀಯ ಯುವಕರಿಗೆ ಉದ್ಯೋಗದ ಬಾಗಿಲು ತೆರೆಯುವಲ್ಲಿ ಸಹಾಯಮಾಡಲಿದ್ದು, ವಿದ್ಯಾರ್ಥಿಗಳು, ಕಾಲೇಜು ಅಧ್ಯಾಪಕರು, ಬೋಧಕ/ಬೋಧಕಿಯರು ಮತ್ತು ತಿಪಟೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕುಮಾರಸ್ವಾಮಿ ಎಚ್.ಬಿ. ಅವರು ಮನವಿ ಮಾಡಿದ್ದಾರೆ.

 

 

 

Author:

...
Keerthana J

Copy Editor

prajashakthi tv

share
No Reviews