ಪಾವಗಡ : ನರೇಗಾ ಕಾಮಗಾರಿಯಲ್ಲಿ ಜೆಸಿಬಿಗಳದ್ದೇ ಕಾರುಬಾರು

ಪಾವಗಡ :

ಗ್ರಾಮೀಣ ಮಟ್ಟದಲ್ಲಿ ವಾಸಿಸುವ ಜನರಿಗೆ ಕೆಲಸ ಕೊಡಬೇಕು ಅನ್ನೋ ದೃಷ್ಟಿಯಿಂದ ನರೇಗಾ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ. ಇದ್ರಿಂದ ಗ್ರಾಮೀಣ ಮಟ್ಟದಲ್ಲಿ ಬಡವರಿಗೆ ಕೆಲಸ ನೀಡುವ ಮೂಲಕ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡಲಾಗ್ತಿದೆ. ಆದ್ರೆ ಇಂತಹ ಯೋಜನೆ ಇಂದು ನಿಜವಾದ ಫಲಾನುವಿಗೆ ತಲುಪದೆ ಮದ್ಯವರ್ತಿಗಳ ಪಾಲಾಗ್ತಿದೆ. ದಿನಗೂಲಿ ಕೊಟ್ಟು ಜನರಿಗೆ ಕೆಲಸ ಕೊಡೋ ಬದಲು ಜೆಸಿಬಿಗಳಿಂದ ಕೆಲಸ ಮಾಡಿ ಹಣದೋಚುವ ಕೆಲಸವಾಗ್ತಿದೆ. ಇದಕ್ಕೆ ಪೂರಕವಾಗಿ ಪಾವಗಡ ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗೆ ಜೆಸಿಬಿಗಳನ್ನ ಬಳಸುತ್ತಿರುವುದು ಕಂಡು ಬಂದಿದೆ.

ಹೌದು, ಕಳೆದ ಎರಡು ಮೂರು ದಿನಗಳ ಹಿಂದೆಯಷ್ಟೆ ವೈ.ಎನ್‌.ಹೊಸಕೋಟೆಯಲ್ಲಿ ನಡೆದ ನರೇಗಾ ಕಾಮಗಾರಿ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ನಮಗೆ ಕೆಲಸ ಕೊಡದೆ ಜೆಸಿಬಿ ಮೂಲಕ ಕೆಲಸ ಮಾಡಲಾಗುತ್ತಿದೆ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು. ಇದು ಮಾಸುವ ಮುನ್ನವೇ ಈಗ ಪಾವಗಡದಲ್ಲಿ ಮತ್ತೆ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿರುವ ದೃಶ್ಯ ಕಂಡುಬಂದಿದೆ.

ಪಾವಗಡ ತಾಲ್ಲೂಕಿನ ಟಿ.ಎನ್ ಪೇಟೆ ಕೆರೆಯಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಮತ್ತು ಅಭಿವೃದ್ಧಿ ಮಾಡುವ ಕಾಮಗಾರಿ ಶುರು ಮಾಡಲಾಗಿದೆ. ಆದರೆ ಈ ಕಾಮಗಾರಿಯಲ್ಲಿ ಜನರ ಬದಲು ಜೆಸಿಬಿಗಳಿಂದ ಕೆರೆ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ.

ಇನ್ನು ತಾಲೂಕಿನೆಲ್ಲೆಡೆ ಬಹುತೇಕ ನಡೆಯುತ್ತಿರುವ ನರೇಗಾ ಕಾಮಗಾರಿಯಲ್ಲಿ ಜನರ ಬದಲಾಗಿ ಜೆಸಿಬಿಗಳಿಂದಲೇ ಕೆಲಸ ಮಾಡಲಾಗುತ್ತಿದೆ. ಇದ್ರಿಂದ ಗ್ರಾಮೀಣ ಭಾಗದ ಜನರು ಕೂಲಿ ಸಿಗದೆ ಪರದಾಡುತ್ತಿದ್ದಾರೆ, ನರೇಗಾ ಯೋಜನೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಮದ್ಯವರ್ತಿಗಳ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಇನ್ನು ಈ ಕೆಲಸದಲ್ಲಿ ಯಾರಿಗೆ ಎಷ್ಟೇಷ್ಟು ಪರ್ಸೆಂಟೇಜ್‌ ಹೋಗುತ್ತಿದೆ ಅನ್ನೋ ಪ್ರಶ್ನೆ ಸಾರ್ಜನಿಕರಲ್ಲಿ ಮೂಡುತ್ತಿದೆ. ಇಂತಹ ಅಕ್ರಮ ಕಾಮಗಾರಿ ಗೊತ್ತಿದ್ದರು ತಾಲೂಕು ಪಂಚಾಯಿತಿ ಅಧಿಕಾರಿಗಳು ಕಣ್ಣುಮುಚ್ಚಿ ಕೂತ್ತಿದ್ದಾರೆ ಎನ್ನಲಾಗ್ತಿದೆ. ಮಾಧ್ಯಮದಲ್ಲಿ ಇಂತಹ ವಿಚಾರ ಹರಿದಾಡ್ತಿದ್ದರು ಯಾವೊಬ್ಬ ಅಧಿಕಾರಿಯೂ ಗಮನಹರಿಸದಿರುವುದು ಶೋಚನೀಯ. ಇನ್ನು ನರೇಗಾ ಇಂಜಿನಿಯರ್‌ ಗಳಿಗೆ ಕರೆ ಮಾಡಿದ್ರೆ ಸ್ವಿಚ್‌ ಆಪ್‌ ಬರ್ತಿದೆ. ಇನ್ನಾದ್ರೂ ಜಿಲ್ಲಾಪಂಚಾಯ್ತಿ ಸಿಇಓ ಪ್ರಭು ಅವರು ಇತ್ತ ಗಮನಹರಿಸಿ ಅಕ್ರಮವನ್ನು ತಡೆಯಬೇಕಿದೆ.

 

 

Author:

...
Keerthana J

Copy Editor

prajashakthi tv

share
No Reviews