ಪಾವಗಡ: ಬೆಂಕಿ ದುರಂತದಲ್ಲಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಜಪಾನಂದ ಶ್ರೀ

ಜಪಾನಂದ ಶ್ರೀ ಅವರು ಸಂತ್ರಸ್ತರಿಗೆ ಸಹಾಯ ಮಾಡಿರುವುದು.
ಜಪಾನಂದ ಶ್ರೀ ಅವರು ಸಂತ್ರಸ್ತರಿಗೆ ಸಹಾಯ ಮಾಡಿರುವುದು.
ತುಮಕೂರು

ಪಾವಗಡ:

ಪಾವಗಡ ತಾಲೂಕಿನ ಕೆ.ಟಿ ಹಳ್ಳಿ ಬಳಿ ಶಿವಣ್ಣ, ರಾಮಣ್ಣ ಎಂಬುವವರ ಮನೆಯಲ್ಲಿ ಮಾರ್ಚ್‌ 7ರಂದು ಬೆಂಕಿ ದುರಂತ ಸಂಭವಿಸಿತ್ತು. ದುರಂತದಲ್ಲಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ವೇಳೆ ಅದೃಷ್ಟವಶಾತ್ ಕುಟುಂಬದವರಿಗೆ ಯಾವುದೇ ಪ್ರಾಣಪಾಯ ಸಂಭವಿಸಿರಲಿಲ್ಲ. ಆದರೆ ಮನೆಯಲ್ಲಿದ್ದ ದಿನಸಿ ಪದಾರ್ಥ ಸೇರಿ ಎಲ್ಲವೂ ಸುಟ್ಟು ಹೋಗಿತ್ತು.

ದುರಂತದ ಸ್ಥಳಕ್ಕೆ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯ ಜಪಾನಂದ ಜೀ ಭೇಟಿ ನೀಡಿ, ತಕ್ಷಣ ಅಗತ್ಯವಿರುವ ದಿನಸಿ ಪದಾರ್ಥಗಳು, ಅಡುಗೆ ಪಾತ್ರೆಗಳು, ಜೊತೆಗೆ, ಕುಟುಂಬದ ಸದಸ್ಯರಿಗೆ ನೂತನ ವಸ್ತ್ರಗಳಾದ ಸೀರೆ, ಪಂಚೆ, ಟವೆಲ್ ಹಾಗೂ ಸೊಳ್ಳೆ ಪರದೆಗಳನ್ನು ಸಹ ನೀಡುವ ಮೂಲಕ ಸಹಾಯ ಹಸ್ತ ಚಾಚಿದರು. ಸಂದರ್ಭದಲ್ಲಿ ರೈತ ಸಂಘದ ಪರವಾಗಿ ಶ್ರೀ ಪೂಜಾರಪ್ಪನವರು ಪೂಜ್ಯ ಸ್ವಾಮೀಜಿಯವರನ್ನು ಗೌರವಿಸಿದರು. ಕಳೆದ 30 ವರ್ಷಗಳಿಂದ ಅನೇಕ ರಾಜ್ಯಗಳಲ್ಲಿ ಬಡಜನರಿಗಾಗಿ ನಿರಂತರ ಸೇವೆ ನೀಡುತ್ತಿರುವ ಸ್ವಾಮೀಜಿಯವರ ತಕ್ಷಣದ ಸ್ಪಂದನೆ ಸರ್ಕಾರಕ್ಕೂ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ರಾಮಕೃಷ್ಣ ಸೇವಾಶ್ರಮವು ಕೋವಿಡ್, ಬರಗಾಲ, ಪ್ರವಾಹ, ಮತ್ತು ಇತರ ಪ್ರಾಕೃತಿಕ ವಿಪತ್ತುಗಳ ಸಮಯದಲ್ಲಿಯೂ ಸಹಾಯ ಕಾರ್ಯಗಳನ್ನು ನಡೆಸುತ್ತಿರುವುದು ಎಲ್ಲರಿಗೂ ಪರಿಚಿತ. ನಿಸ್ವಾರ್ಥ ಸೇವಾ ಧೋರಣೆಯು ಜನರಲ್ಲಿ ಭರವಸೆ ಮೂಡಿಸುತ್ತಿದ್ದು, ಸ್ವಾಮಿ ವಿವೇಕಾನಂದರ ಸಂದೇಶದಂತೆ "ಮಾನವನ ಸೇವೆಯಲ್ಲಿಯೇ ಶಿವನ ಸೇವೆ" ಎಂಬ ಧ್ಯೇಯವನ್ನು ಕಾರ್ಯರೂಪಕ್ಕೆ ತರಲು ಸೇವಾಶ್ರಮ ಮುಂದಾಗಿದೆ.

 

Author:

share
No Reviews