ತುಮಕೂರು:
ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮುತ್ತುರಾಯಸ್ವಾಮಿ, ಗುಗ್ರಿಮಾರಮ್ಮ, ಈರಮಾಸ್ತಮ್ಮ ಹಾಗೂ ಹುಲ್ಲೂರಮ್ಮ ದೇವರುಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಗುಗ್ರಿಮಾರಮ್ಮನ ಕಳಸ ಹೊರುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ರಥದಲ್ಲಿ ಮುತ್ತುರಾಯಸ್ವಾಮಿ ಹಾಗೂ ಗುಗ್ರಿಮಾರಮ್ಮ ದೇವರಗಳನ್ನ ಕೂರಿಸಿ ರಥೋತ್ಸವ ಎಳೆಯಲಾಯಿತು. ಇನ್ನೂ ವಿಶೇಷವಾಗಿ ಜಿಲ್ಲೆಯಲ್ಲಿ ನಡೆಯುವ ಏಕೈಕ ಆಚರಣೆ ಗಂಡು ಮಗುವಿಗೆ ಹೆಣ್ಣು ದೇವತೆ ರೂಪದಲ್ಲಿ ಸಿಂಗರಿಸಿ ನಡೆಸುವ ಈರಮಾಸ್ತಿ ಕುಣಿತ ಜನರ ಮನಸೂರೆಗೊಳಿತು.
ಜೊತೆಗೆ ಈರಮಾಸ್ತಿ ಕುಣಿತದೊಂದಿಗೆ ರಥೋತ್ಸವವು ಸಾಗಿದ್ದು ಈರಮಾಸ್ತಿ ಬೆಂಕಿ ಹಾರುವ ಮೂಲಕ ಜಾತ್ರಾಮಹೋತ್ಸವ ವೈಭವದಿಂದ ಜರುಗಿತು.ಇನ್ನೂ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದು ಸ್ವಾಮಿಯ ಕೃಪೆಗೆ ಪಾತ್ರರಾದರು.