IPL 2025 : ಆರ್‌ ಸಿಬಿ ತಂಡವನ್ನು ಹಿಂದಿಕ್ಕಿದ ಗುಜರಾತ್‌ ಟೈಟಾನ್ಸ್..!

IPL 2025 :

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಮತ್ತೊಮ್ಮೆ ಎಡವಿದೆ. ಗುಜರಾತ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸಂಪೂರ್ಣ ವಿಫಲವಾಗಿದೆ. ನಾಯಕ ಶುಭಮನ್‌ ಗಿಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಮುಂಬೈ ಇಂಡಿಯನ್ಸ್‌ ವಿರುದ್ದ ಗುಜರಾತ್‌ ಟೈಟಾನ್ಸ್ ತಂಡ ಗೆದ್ದು ಬೀಗಿದೆ.

20 ಓವರ್‌ ಗಳಲ್ಲಿ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತು, ಈ ಗುರಿಯನ್ನು ಬೆನ್ನತ್ತಿದ ಗುಜರಾತ್‌ ಟೈಟಾನ್ಸ್‌ ತಂಡ 14 ಓವರ್‌ ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿತ್ತು, ಆದರೆ ಮಳೆಯ ವಿರಾಮದ ಬಳಿಕ 6 ವಿಕೆಟ್‌ ನಷ್ಟಕ್ಕೆ 132 ರನ್‌ ಕಲೆ ಹಾಕ್ತು, ಮತ್ತೆ ಮುಂಬೈನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯ್ತು, ಟಾರ್ಗೆಟ್‌ 147 ರನ್‌ ಗಳನ್ನು ಎದುರಿಸಿದ ಗುಜರಾತ್‌ ಟೈಟಾನ್ಸ್‌ 3 ವಿಕೆಟ್‌ ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿ ಗೆದ್ದು ಬೀಗಿದೆ. 11 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟಾನ್ಸ್ 8 ಪಂದ್ಯಗಳನ್ನು ಗೆದ್ದು ಟೇಬಲ್ ಪಾಯಿಂಟ್ಸ್‌ ನಲ್ಲಿ ಟಾಪರ್ ಆಗಿದೆ. ರನ್ ರೇಟ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡವನ್ನೇ ಗುಜರಾತ್ ಟೈಟಾನ್ಸ್ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದೆ

ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ 56 ಪಂದ್ಯಗಳು ಈಗಾಗಲೇ ಮುಗಿದಿದ್ದು, ಗುಜರಾತ್‌ ಟೈಟಾನ್ಸ್‌ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿದೆ.

 

Author:

...
Sushmitha N

Copy Editor

prajashakthi tv

share
No Reviews