IPL 2025 :
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆದ್ದು ಪ್ಲೇ ಆಫ್ ರೇಸ್ ನಲ್ಲಿ ಉಳಿಲೇಬೇಕು ಅಂತ ಹೈದರಾಬಾದ್ ತಂಡ ಫುಲ್ ಆಲರ್ಟ್ ಆಗಿತ್ತು. ಆದರೆ ಹೈದರಾಬಾದ್ ಕನಸಿಗೆ ನಿನ್ನೆ ಬಂದ ಮಳೆ ತಣ್ಣೀರೆರಚಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 55 ನೇ ಪಂದ್ಯದಲ್ಲಿ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು 20 ಓವರ್ ಗಳಲ್ಲಿ 133 ರನ್ ಕಲೆಹಾಕಿತ್ತು. ಆದರೆ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ತಂಡಗಳಿಗೆ 2 ಅಂಕಗಳನ್ನು ಸಮನಾಗಿ ಹಂಚಲಾಯಿತು.
ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ಟಿ.ನಟರಾಜನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಬೌಲಿಂಗ್ ಮಾಡಲು ಕಾಣಿಸಿಕೊಂಡಿದ್ದರು, ಆದರೆ ಮಳೆ ಬಂದಿದ್ದರಿಂದ ಬೌಲಿಂಗ್ ಮಾಡೋ ಅವಕಾಶದಿಂದ ವಂಚಿತರಾದರು.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನಿಂಗ್ಸ್ನ ಮೊದಲ ಎಸೆತದಲ್ಲೇ ಕರುಣ್ ನಾಯರ್ ವಿಕೆಟ್ ಕಬಳಿಸಿ ಕಮಿನ್ಸ್ ಎಸ್ಆರ್ಹೆಚ್ ತಂಡಕ್ಕೆ ಶುಭಾರಂಭ ನೀಡಿದರು. ಬಳಿಕ 3ನೇ ಓವರ್ನಲ್ಲಿ ಮರಳಿದ ಪ್ಯಾಟ್ ಕಮಿನ್ಸ್, ಮೊದಲ ಎಸೆತದಲ್ಲೇ ಫಾಫ್ ಡುಪ್ಲೆಸಿಸ್ ವಿಕೆಟ್ ಕಬಳಿಸಿದರು. ಬಳಿಕ 5ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಕಮಿನ್ಸ್, ಮೊದಲ ಬಾಲ್ನಲ್ಲೇ ಅಭಿಷೇಕ್ ಪೊರೆಲ್ ವಿಕೆಟ್ ಪಡೆದರು. ಈ ಮೂಲಕ ಪವರ್ಪ್ಲೇನಲ್ಲಿ ಎಸೆದ ಮೂರು ಓವರ್ಗಳ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಅಲ್ದೇ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಬಳಿಸಿದ ಮೊದಲ ಕ್ಯಾಪ್ಟನ್ ಎಂಬ ದಾಖಲೆಯನ್ನು ಸಹ ಪ್ಯಾಟ್ ಕಮಿನ್ಸ್ ತನ್ನದಾಗಿಸಿಕೊಂಡಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್ ಮುಗಿದೊಡನೆ ಸುರಿದ ಮಳೆ ಬಹಳ ಹೊತ್ತು ಬಿಡಲಿಲ್ಲವಾದದ್ದರಿಂದ ಅಂತಿಮವಾಗಿ ಪಂದ್ಯವನ್ನು ರದ್ದು ಗೊಳಿಸಿ ಇತ್ತಂಡಗಳಿಗೂ ತಲಾ 1 ಅಂಕವನ್ನು ನೀಡಲಾಯಿತು. ಹೀಗಾಗಿ ಆಡಿರುವ 11 ಪಂದ್ಯಗಳಿಂದ 7 ಅಂಕಗಳನ್ನಷ್ಟೇ ಕಲೆ ಹಾಕುವಲ್ಲಿ ಯಶಸ್ವಿಯಾಗಿರುವ ಪ್ಯಾಟ್ ಕಮಿನ್ಸ್ ಪಡೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಅಧಿಕೃತವಾಗಿ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿರುವ ಮೂರನೇ ತಂಡವಾಗಿದೆ.