India : ವಿಶ್ವದ ಅತಿ ಎತ್ತರದ ರೈಲು ಸೇತುವೆ ಚೆನಾಬ್ ಕಮಾನು ಸೇತುವೆ ಉದ್ಘಾಟನೆ

SRINAGARA : ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ (Chenab Railway Arch Bridge) ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 6ರಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

ಈ ಸೇತುವೆ ನೈಸರ್ಗಿಕ ಭೂದೃಶ್ಯಗಳ ನಡುವೆ, ಹಿಮಾಲಯದ ಹಿಮಪಾತ ಪರ್ವತಗಳು ಮತ್ತು ದಟ್ಟ ಕಾಡುಗಳ ನಡುವೆ ಅಬ್ಬರದ ಪ್ರಾಕೃತಿಕ ಸೌಂದರ್ಯವನ್ನು ಮೆರೆದಿದ್ದು, ತಾಂತ್ರಿಕ ಹಾಗೂ ಆರ್ಕಿಟೆಕ್ಚರಲ್ ದೃಷ್ಟಿಯಿಂದ ಭಾರತದ ಇಂಜಿನಿಯರಿಂಗ್‌ ಸಾಧನೆಯ ಪ್ರತೀಕವಾಗಿದೆ.

ಇನ್ನು ಈ ಸೇತುವೆ ಸಮುದ್ರ ಮಟ್ಟದಿಂದ ಸುಮಾರು 1,178 ಅಡಿ (359 ಮೀಟರ್) ಎತ್ತರದಲ್ಲಿ ನಿರ್ಮಾಣಗೊಂಡಿದೆ, ಇದು ಎಫಿಲ್ ಟವರ್ ಗಿಂತಲೂ ಎತ್ತರವಾಗಿದೆ. ಉಧಂಪುರ್-ಶ್ರೀನಗರ-ಬರಮುಲ್ಲಾ ರೈಲು ಮಾರ್ಗದ ಪ್ರಮುಖ ಭಾಗವಾಗಿದ್ದು, ಜಮ್ಮು-ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ರೈಲ್ವೆ ಮೂಲಕ ಗಟ್ಟಿಯಾಗಿ ಸಂಪರ್ಕಿಸುತ್ತದೆ. ಭಾರತದ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಎತ್ತರದಲ್ಲಿ ಕಮಾನು ಶೈಲಿಯ ಸೇತುವೆ ನಿರ್ಮಾಣಗೊಂಡಿರುವುದು ಮಹತ್ವದ ಸಾಧನೆ.

ಈ ಸೇತುವೆಯು ಕೇವಲ ಲೋಹದ ತಂತ್ರಜ್ಞಾನದ ಅದ್ಭುತವಲ್ಲದೆ, ರಾಷ್ಟ್ರೀಯ ಏಕತೆ, ಭೌಗೋಳಿಕ ಸಮಗ್ರತೆ, ಹಾಗೂ ವಿಕಾಸಾತ್ಮಕ ಸಂಪರ್ಕದ ದಿಗ್ಗಜ ಹೆಜ್ಜೆಯೂ ಹೌದು. ಕಣಿವೆಯ ಜನತೆಗೆ ಉತ್ತಮ ಸಂಪರ್ಕ, ಆರ್ಥಿಕ ಉನ್ನತಿ ಹಾಗೂ ಪ್ರವಾಸೋದ್ಯಮ ವೃದ್ಧಿಗೆ ಇದು ಸಹಕಾರಿಯಾಗಲಿದೆ ಎನ್ನಲಾಗ್ತಿದೆ.
 

Author:

...
Sushmitha N

Copy Editor

prajashakthi tv

share
No Reviews