ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ ದೊರೆತಿದೆ.ಕರಾಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ನ್ಯೂಝಿಲೆಂಡ್ ತಂಡ ಶುಭಾರಂಭ ಮಾಡಿದೆ.ಇದೀಗ 2ನೇ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಬಾಂಗ್ಲಾದೇಶ ತಂಡದ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಮೆನ್ ಇನ್ ಬ್ಲ್ಯೂ, ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ. ಈ ಹಿಂದಿನ ಸರಣಿಗಳಲ್ಲಿ ಸಿಹಿ ಕಹಿ ಎರಡರ ಸವಿಯನ್ನುಂಡಿರುವ ಭಾರತ ತಂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ವೈಫಲ್ಯವನ್ನು ಮೀರಿ ಭಾರಿ ಗೆಲುವಿನ ಆರಂಭಕ್ಕಾಗಿ ಹೋರಾಟ ನಡೆಸಬೇಕಿದೆ.
ಇನ್ನೂ ಭಾರತ ತಂಡದ ಬ್ಯಾಟಿಂಗ್ ನಲ್ಲಿ ಶುಭಮನ್ ಗಿಲ್ ಅಗ್ರ ಕ್ರಮಾಂಕದಲ್ಲಿ, ಕೆ.ಎಲ್ ರಾಹುಲ್, ಶ್ರೇಯಸ್ ಐಯರ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ.ಇತ್ತ ಬೌಲಿಂಗ್ನಲ್ಲಿ ಬುಮ್ರಾ ಅನುಪಸ್ಥಿತಿ ಕೊಂಚ ಕಾಡುವ ಸಾಧ್ಯತೆ ಇದೆ.
ಈಗಷ್ಟೇ ಗಾಯದ ಸಮಸ್ಯೆಯಿಂದ ವಾಪಸ್ ಆಗಿರೋ ಮೊಹಮ್ಮದ್ ಶಮಿ ಬೌಲಿಂಗ್ ಪಡೆ ಮುನ್ನಡಸಲಿದ್ದಾರೆ. ಶಮಿ ಜೊತೆ ಅರ್ಷ್ದೀಪ್ ಸಿಂಗ್ ಜೊತೆಯಾದ್ರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ ಕಮಾಲ್ ಮಾಡುವ ಸಾಧ್ಯತೆ ಇದೆ. ಜೊತೆಗೆ ಅಲ್ರೌಂಡರ್ ವಿಭಾಗದಲ್ಲಿ ಜಡ್ಡು, ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ನೆರವಾಗಲಿದ್ದಾರೆ.