India :
ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ಉಗ್ರರ ನೆಲಗಳ ಮೇಲೆ ಇಂದು ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿರುವ ಶೇಖ್ ಉಲ್-ಆಲಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಜೊತೆಗೆ, ವಾಯುವ್ಯ ಭಾರತದ ಹಲವಾರು ವಿಮಾನ ನಿಲ್ದಾಣಗಳನ್ನು ಮುಂದಿನ ಸೂಚನೆ ಬರುವವರೆಗೆ ಬಂದ್ ಮಾಡಲಾಗಿದೆ.
ಶ್ರೀನಗರ ಸೇರಿದಂತೆ ಕೆಲವು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ವಿಮಾನಯಾನ ಸಂಸ್ಥೆಗಳು ಕೆಲವು ನಗರಗಳಿಂದ ವಿಮಾನ ಸೇವೆ ರದ್ದುಗೊಳಿಸಿವೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ವಿಮಾನಗಳ ಹಾರಾಟವನ್ನು ಮಧ್ಯಾಹ್ನದವರೆಗೆ ರದ್ದುಗೊಳಿಸಲಾಗಿದೆ. ಅಮೃತಸರಕ್ಕೆ ಹೋಗಬೇಕ್ಕಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ದೆಹಲಿಗೆ ಡೈವರ್ಟ್ ಮಾಡಲಾಗಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ವಿಷಾದ ವ್ಯಕ್ತಪಡಿಸಿದೆ.