India : ಪಾಕ್ ಗೆ ಮತ್ತೊಂದು ಶಾಕ್ | 16 ಯುಟ್ಯೂಬ್ ಚಾನಲ್ ಗಳು ಬಂದ್

INDIA :

ಪಹಲ್ಗಾಮ್​ ಉಗ್ರ ದಾಳಿಯ ಬಳಿಕ ಭಾರತ ಈಗ ರಾಜತಾಂತ್ರಿಕ ದಾಳಿಗೆ ಮುಂದಾಗಿದೆ. ಅದರಂತೆ ಒಂದರ ಹಿಂದೆ ಒಂದರಂತೆ ಪಾಕಿಸ್ತಾನಕ್ಕೆ ಶಾಕ್‌ ಮೇಲೆ ಶಾಕ್‌ ನೀಡ್ತಿದೆ. ಭಾರತದಲ್ಲಿ ವಾಸಿಸುತ್ತಿದ್ದ 537 ಜನ ಪಾಕ್‌ ಪ್ರಜೆಗಳನ್ನು ವಾಪಾಸ್‌ ಕಳುಹಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು. ದೇಶದ ಬಗ್ಗೆ ಪಾಕಿಸ್ತಾನ ಸುಳ್ಳು ಸುದ್ದಿ ಹರಡದಂತೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪಾಕಿಸ್ತಾನದ 16 ಯುಟ್ಯೂಬ್‌ ಚಾನಲ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಉಗ್ರರ ಅಟ್ಟಹಾಸ ಖಂಡಿಸಿ ಪ್ರಧಾನಿ ಮೋದಿ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಹಲವು ರೀತಿಯಲ್ಲಿ ಪಾಕಿಸ್ತಾನಕ್ಕೆ ಏಟಿನ ಮೇಲೆ ಏಟು ನೀಡ್ತಿದಾರೆ. ಪಹಲ್ಗಾಮ್‌ ದಾಳಿಯ ನಂತರ ಪಾಕಿಸ್ತಾನವು ಪ್ರಚಾರ ಯುದ್ಧ ಕೈಗೊಂಡಿದೆ. ಪ್ರಪಂಚದ ಮುಂದೆ ತಾನು ಸಾಚಾ ಅಂತ ತೋರಿಸಿಕೊಳ್ಳಲು ಹೊರಟಿದೆ. ಹೀಗಾಗಿ ತನ್ನ ಯೂಟ್ಯೂಬ್‌ ಚಾನಲ್‌ಗಳ ಮೂಲಕ ದೇಶದ ಹೆಸರನ್ನು ಹಾಳು ಮಾಡಲು ಸನ್ನದ್ಧವಾಗಿದೆ. ಪಾಕಿಸ್ತಾನದ ಈ ಪಿತೂರಿಯ ವಿರುದ್ಧ ಭಾರತ ಪ್ರತೀಕಾರಕ್ಕೆ ಮುಂದಾಗಿದೆ. ಇದರ ಭಾಗವಾಗಿ ಭಾರತದಲ್ಲಿ ಪ್ರಸಾರವಾಗುತ್ತಿರುವ ಪಾಕಿಸ್ತಾನಿ ಯೂಟ್ಯೂಬ್‌ ಚಾಲನಲ್‌ ಗಳಿಗೆ ಸಂಪೂರ್ಣ ಕಡಿವಾಣ ಹಾಕಿದೆ. ದೇಶದ ಮತ್ತು ಸೈನ್ಯದ ಮೇಲೆ ಅಪಪ್ರಚಾರ ಮಾಡುತ್ತಿರೋ 16 ಚಾನಲ್‌ಗಳನ್ನು ನಿರ್ಬಂಧಿಸಿದೆ.

ನಮ್ಮ ದೇಶ, ನಮ್ಮ ಸೇನೆ ಮತ್ತು ನಮ್ಮ ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಮತ್ತು ದಾರಿ ತಪ್ಪಿಸುವ ನಿರೂಪಣೆಗಳೊಂದಿಗೆ ಪ್ರಚೋದನಕಾರಿ ಹಾಗೂ ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್‌ ಚಾನಲ್‌ಗಳನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಶಿಫಾರಸ್ಸಿನ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಂಡಿದೆ.

Author:

...
Sushmitha N

Copy Editor

prajashakthi tv

share
No Reviews