Operation Sindhur :
ದೇಶದೆಲ್ಲೆಡೆ ಪಹಲ್ಗಾಮ್‌ನಲ್ಲಿ ಉಗ್ರರ ಹತ್ಯೆಯನ್ನು ಖಂಡಿಸಿ ಕಿಚ್ಚು ಹೆಚ್ಚಾಗಿತ್ತು. ಮತ್ತೊಂದು ಕಡೆ ದೇಶದ ಜನರ ಮಾತಿನಂತೆ ಆ ಉಗ್ರರರನ್ನು ಮಟ್ಟ ಹಾಕಲೇಬೇಕು ಎಂದು ಮೋದಿ. ಆದರೆ ಉಗ್ರರ ವಿರುದ್ಧದ ಪ್ರತೀಕಾರದ ಬಗ್ಗೆ ದೇಶದ ಮೂರು ಪಡೆಯ ಮುಖ್ಯಸ್ಥರು ಎಲ್ಲಿಯೂ ಬಾಯ್ ಬಿಟ್ಟಿರಲಿಲ್ಲ. ಇಂದು ಮುಂಜಾನೆ ದೇಶದ ಸೈನ್ಯ ಕೊಟ್ಟ ಶಾಕ್ ಗೆ ಪಾಕ್ ಬೆಚ್ಚಿಬಿದ್ದರೆ, ದೇಶ ಖುಷಿ ಪಟ್ಟಿತ್ತು. ನೋಡ ನೋಡುತ್ತಲೇ ಭಾರತೀಯ ಸೈನ್ಯ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೇ ಕ್ಷಿಪಣಿ ದಾಳಿ ನಡೆಸಿ ತಾಣಗಳನ್ನು ಸಂಪೂರ್ಣ ಉಡೀಸ್ ಮಾಡಿತ್ತು.
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈರಸನ್ ನಲ್ಲಿ ಉಗ್ರರು ದಾಳಿ ಮಾಡಿ 26 ಜನರನ್ನು ಕೊಂದಿದ್ದರು. ಅದರ ಪ್ರತೀಕಾರವಾಗಿ ಭಾರತ ಪಾಕ್‌ನ ಎಲ್ಲಾ ರೀತಿಯ ಸಂಬಂಧಗಳಿಗೂ ಕಡಿವಾಣ ಹಾಕಿತ್ತು. ನಂತರ ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕಲು ಮೋದಿ ಅಂಡ್ ಟೀಮ್ ಮಾಸ್ಟರ್ ಪ್ಲಾನ್ ಮಾಡಿತ್ತು. ಅದರಂತೆ ಮೂರು ಪಡೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿತ್ತು. ಇನ್ನು ಯುದ್ಧ ಸಂಬಂಧದ ತೀರ್ಮಾನಗಳನ್ನು ಕೈಗೊಳ್ಳಲು ಮುಖ್ಯಸ್ಥರಿಗೆ ಮುಕ್ತ ಅವಕಾಶ ನೀಡಿತ್ತು. ಈ ಬಾರಿ ಕಣದಲ್ಲಿ ಇದ್ದದ್ದು ಇಬ್ಬರು ದಿಟ್ಟ ಹೆಣ್ಣು ಮಕ್ಕಳು. ಅವರು ಬೇರೆ ಯಾರು ಅಲ್ಲ ನಮ್ಮ ದೇಶದ ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯುಮಿಕ ಸಿಂಗ್.
ಇವೆಲ್ಲದರ ನಡುವೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಅಡಗು ದಾಣಗಳನ್ನು ಉಡೀಸ್ ಮಾಡೋ ಪ್ಲಾನ್ ಮಾಡಲಾಯಿತು. ಈ ಒಂದು ಹೋರಾಟಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ʼಆಪರೇಷನ್ ಸಿಂಧೂರ್ʼ ಎಂದು ಹೆಸರಿಟ್ಟರು. ಯುದ್ಧಕ್ಕೆ ಸನ್ನದ್ಧವಾದ ಸೇನೆ ಇಂದು ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿತು.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ, ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯುಮಿಕ ಸಿಂಗ್ ಸಭೆ ನಡೆಸಿ ಕೈಗೊಂಡ ನಿರ್ಧಾರದಿಂದಾಗಿ ಇಂದು ಪಾಕ್ ನ ಉಗ್ರರ ಅಡಗು ತಾಣಗಳು ಸುಟ್ಟು ಭಸ್ಮವಾಗಿವೆ. ಗಡಿಯಾಚೆಗಿನ ಭಯೋತ್ಪಾದನೆಯ ನೇರ ಸಂಪರ್ಕದ ಸಂಬಂಧ ಕುರಿತು ನಿಖರ ಗುಪ್ತಚರ ಮಾಹಿತಿ ಪಡೆಯಲಾಯಿತು. ಬಂದ ಮಾಹಿತಿಯ ಆಧಾರದ ಮೇಲೆ ಎಚ್ಚರಿಕೆಯಿಂದ ದಾಳಿ ನಡೆಸಿತು.
ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ದಾಳಿ ರೂಪಿಸಿ, ನಡೆಸಿದ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಲಾಹೋರ್‌ನಿಂದ ಸುಮಾರು 40 ಕಿಲೋಮೀಟರ್ ಉತ್ತರದಲ್ಲಿರುವ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ತರಬೇತಿ ನೆಲೆಯೂ ಸೇರಿದಂತೆ 9 ಕಡೆಗಳಲ್ಲಿ ಆಪರೇಷನ್ ನಡೆದಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ಇಲ್ಲಿಂದಲೇ ತರಬೇತಿ ಪಡೆದಿದ್ದರು ಎನ್ನಲಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಜೈಶ್ ಎ ಮೊಹಮ್ಮದ್ ಭದ್ರಕೋಟೆಯಾದ ಬಹವಾಲ್ಪುರ್ ಹಾಗೂ ಲಷ್ಕರ್ ಎ ತೋಯ್ಬಾದ ಮುರಿಡ್ಕೆ ನೆಲೆಗಳು ಸೇರಿದಂತೆ 9 ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತು. ಆಪರೇಷನ್ ಸಿಂದೂರ್ ಹೆಸ್ರಲ್ಲಿ ದೇಶದ ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದ್ದ ಉಗ್ರರಿಗೆ ಇದರ ಮೂಲಕ ದೇಶ ಪ್ರತ್ಯುತ್ತರ ನೀಡಿದೆ.