India : ಹಲವು ನಗರಗಳಿಗೆ ಮತ್ತೇ ಏರ್‌ ಇಂಡಿಯಾ, ಇಂಡಿಗೋ ವಿಮಾನ ಹಾರಾಟ ರದ್ದು

India : 

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ಸಂಸ್ಥೆಗಳು ಇಂದು ಉತ್ತರ ಮತ್ತು ಪಶ್ಚಿಮ ಭಾರತದ ಅನೇಕ ನಗರಗಳಿಗೆ ವಿಮಾನ ಹಾರಾಟವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆ.

ಕದನ ವಿರಾಮ ಘೋಷಿಸಿದರೂ ಪಾಕ್‌ ತನ್ನ ನರಿ ಬುದ್ದಿ ಬಿಡದೇ ದಾಳಿ ನಡೆಸ್ತಿದ್ದು, ಸಾರ್ವಜನಿಕರ ಹಿತಾ ದೃಷ್ಟಿಯಿಂದ ಜಮ್ಮು, ಶ್ರೀನಗರ, ಜೋಧ್‌ ಪುರ, ಅಮೃತಸರ ಸೇರಿದಂತೆ ಗಡಿಭಾಗದ 7 ನಗರಗಳಿಗೆ ಅಲ್ಲಿಂದ ಹೊರಡುವ ವಿಮಾನಗಳನ್ನು ಏರ್‌ ಇಂಡಿಯಾ ರದ್ದುಗೊಳಿಸಿದೆ. ಈ ಬಗ್ಗೆ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು. ಪರಿಸ್ಥಿತಿಯನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಪ್ರಯಾಣಿಕರ ಸಹಾಯಕ್ಕೆ ಕೆಲವು ಸಂಪರ್ಕ ಸೇವೆ ನಂಬರ್‌ ಮತ್ತು ವೆಬ್ ಸೈಟ್‌ ಗೆ ಭೇಟಿ ನೀಡುವಂತೆ ತಿಳಿಸಲಾಗಿದೆ.

Author:

...
Sushmitha N

Copy Editor

prajashakthi tv

share
No Reviews