INDIA : ಭಾರತೀಯ ನೌಕಾಸೇನೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ..!

ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತೀಯ ನೌಕಾಸೇನೆ ಹಾರಿಸುತ್ತಿರುವುದು.
ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತೀಯ ನೌಕಾಸೇನೆ ಹಾರಿಸುತ್ತಿರುವುದು.
ದೇಶ

ಭಾರತ :

ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತದ ನೌಕಾಸೇನೆ ಪಾಕಿಸ್ತಾನದ ಮೇಲೆ ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ದನೌಕೆಯಿಂದ ಹಾರಿಸಿದ್ದು, ಈ ಮೂಲಕ ಭಾರತೀಯ ನೌಕಾಸೇನೆ ಯುದ್ದಕ್ಕೆ ಸಜ್ಜಾಗಿರುವ ಮುನ್ಸೂಚನೆಯನ್ನು ನೀಡಿದೆ.

ಈಗಾಗಲೇ ಭಾರತೀಯ ಯುದ್ದ ನೌಕೆಗಳು ಅರೇಬಿಯನ್‌ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನ ನಡೆಸಿದೆ. ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನ ನೌಕಾಪಡೆ ತನ್ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಹಂಚಿಕೊಂಡಿದೆ. 

ಈಗಾಗಲೇ ಭಾರತ  ಪಾಕಿಸ್ತಾನ ವಿರುದ್ದ ಹಲವು ನಿಯಮಗಳನ್ನು ಹೊರಡಿಸಿದೆ. ಒಟ್ಟಿನಲ್ಲಿ ಪಹಲ್ಗಾಮ್‌ ನಲ್ಲಿ ಉಗ್ರರು ದಾಳಿ ನಡೆಸಿ 28 ಭಾರತೀಯರನ್ನು ಹತ್ಯೆಗೈದಿದ್ದು, ಇದೀಗ ಭಾರತ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಒಂದು ಕಡೆ ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.

 

Author:

...
Sushmitha N

Copy Editor

prajashakthi tv

share
No Reviews