India :
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಮತ್ತಷ್ಟು ಬಿಗುಡಾಯಿಸಿದೆ. ಗುರುವಾರ ರಾತ್ರಿ ಜಮ್ಮುವಿನಲ್ಲಿ ಪಾಕಿಸ್ತಾನ ಸೇನೆಯಿಂದ ಹಾರಿಬಂದ ಡ್ರೋಣ್, ಮಿಸೈಲ್ಗಳನ್ನು ಭಾರತೀಯ ಸೇನೆ ಆಕಾಶದಲ್ಲೇ ಹೊಡೆದುರುಳಿಸಿದ್ದಾರೆ. ಈ ನಡುವೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಕಡೆಯಿಂದ ಒಳನುಗ್ಗಲು ಯತ್ನಿಸಿದ ಶಂಕಿತ ಉಗ್ರರನ್ನು ಸಹ ಬಿಎಸ್ಎಫ್ ಸೈನಿಕರು ತಡೆಯಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಮ್ಮುವಿನಲ್ಲಿ ಪಾಕಿಸ್ತಾನ ಸೇನೆಯ್ ಡ್ರೋಣ್ ಮತ್ತು ಮಿಸೈಲ್ಗಳನ್ನು ಹಾರಿಸಿದ್ದು, ಇದಕ್ಕೆ ಆಕಾಶದಲ್ಲೇ ಭಾರತ ತಕ್ಕ ಉತ್ತರವನ್ನು ಕೊಟ್ಟಿದ್ದು, ಪಾಕಿಸ್ತಾನದ ದಾಳಿ ಪ್ರಯತ್ನವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಇದರಿಂದ ಕಣಿವೆ ರಾಜ್ಯದ ಜನರು ಭಯ ಭೀತರಾಗಿದ್ದು, ಮನೆಗಳಿಂದ ಹೊರಬರದಂತೆ ಸೇನೆ ಮತ್ತು ಜಿಲ್ಲಾಡಳಿತ ಸೂಚಿಸಿದೆ ಎನ್ನಲಾಗ್ತಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ನಾವು ಅವರ ದಾಳಿಗೆ ಪ್ರತಿಕ್ರಿಯಿಸಿದ್ದೇವೆ. ಪಾಕಿಸ್ತಾನವು ಎಲ್‌ಇಟಿ, ಮಸೂದ್ ಅಜರ್ ಮತ್ತು ಇತರರು ಸೇರಿದಂತೆ, ವಿಶ್ವಸಂಸ್ಥೆ ನಿಷೇಧಿತ ಭಯೋತ್ಪಾದಕರಿಗೆ ನೆಲೆಯಾಗಿದೆ. ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಜಂಟಿ ತಂಡವನ್ನು ರಚಿಸಿ ತನಿಖೆ ಮಾಡಲಾಗ್ತಿದೆ ಎಂದಿದ್ದಾರೆ. ಇನ್ನು ದಾಳಿ ನಡೆದ ಸ್ಥಳಗಳ ಭೇಟಿಗೆ ತನಿಖಾ ಟೀಂಗೆ ಅವಕಾಶ ಕೊಟ್ಟಿದ್ದೇವೆ ಎಂದರು.
ಇನ್ನು ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, ಭಾರತೀಯ ಸೇನೆ ಪಾಕಿಸ್ತಾನದ ಪಂಜಾಬ್ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಮಿಸೈಲ್ ದಾಳಿ ನಡೆಸಿದ್ದು, ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ್ದ ಹೀನ ಕೃತ್ಯಕ್ಕೆ ತಕ್ಕ ಉತ್ತರ ನೀಡಿತು. ಈ ಮಿಸೈಲ್ ದಾಳಿಯಲ್ಲಿ ನೂರಕ್ಕೂ ಉಗ್ರರು ಹತರಾಗಿದ್ದಾರೆ ಎಂದರು.